ಪ್ರಕಟಣೆ

ಫೆ.14 ರಂದು ವೀರಭದ್ರ ಗುಡಿಯ ಪ್ರತಿಷ್ಠಾಪನೆ

ಕುಶಾಲನಗರ, ಫೆ. 12 ಕುಶಾಲನಗರ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ವೀರಭದ್ರ ಗುಡಿ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಫೆ 14. ರಂದು ನಡೆಯಲಿದೆ. ಇದರ ಅಂಗವಾಗಿ ಗುರು ಗಣೇಶ ಪೂಜಾ, ಪುಣ್ಯಾಹವಾಚನ, ವಾಸ್ತು ಹೋಮ, ದಿಗ್ಬಲಿ, ನವಕ ಕಲಶ ಸ್ಥಾಪನೆ, ನಂತರ ಕುಂಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ನಂತರ ತತ್ವಾಧಿಮಾಸ ಹೋಮ, ದುರ್ಗಾ ಹೋಮ ಕಲಶ ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಕುಶಾಲನಗರ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!