ಕುಶಾಲನಗರ, ಫೆ. 04; ಜಿಲ್ಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಡಯಟ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ನವಸಾಕ್ಷರರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು ಕೂಡಿಗೆ ಡಯಟ್ ಸಭಾಂಗಣದಲ್ಲಿ ನಡೆಯಿತು.
ತಾಲ್ಲೂಕಿನ ನವಸಾಕ್ಷರರಾದ 1556 ಮಂದಿಯಲ್ಲಿ ಸಾಂಕೇತಿವಾಗಿ 50 ಮಂದಿಗೆ ಪ್ರಮಾಣ ಪತ್ರವನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ತಾಲ್ಲೂಕಿನ ಅನಕ್ಷರಸ್ಥರಾದ 2004 ಮಂದಿಯಲ್ಲಿ 1556 ಮಂದಿಯನ್ನು ಅಕ್ಷರಸ್ಥರಾಗಿ ಮಾಡಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಶಿಕ್ಷಣದ ವ್ಯವಸ್ಥೆ ಮಾಡುತ್ತಿರುವುದರಿಂದ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಕ್ಷರತೆ ಪ್ರಮುಖವಾಗಿರುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ನೋಡಲ್ ಅಧಿಕಾರಿ ಮಾದೇವ್, ಡಯಟ್ ಉಪನ್ಯಾಸಕಿ ಶಶಿಕಲಾ, ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಕೂಡಿಗೆ ಕ್ಲಸ್ಟರ್ ಸಿ.ಆರ್. ಪಿ ಶಾಂತ ಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು, ಸಿ.ಆರ್ ಪಿ, ಶಿಕ್ಷಕರ ತಂಡ ಹಾಗೂ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತರು, ನವಸಾಕ್ಷರರು, ಹಾಜರಿದ್ದರು.
Back to top button
error: Content is protected !!