ಕುಶಾಲನಗರ, ಜ 07: : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (ಲೆಟರ್ ಹೆಡ್ ) ವಿಳಾಸ ಪುಟದಲ್ಲಿ ಆಂಗ್ಲ ಭಾಷೆಯ ಅಕ್ಷರಗಳಿಂದ ಕೃತಜ್ಞತಾ ಪತ್ರ ಬರೆದು ಕಳಿಸಿರುವ ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷರ ಕನ್ನಡ ಭಾಷಾ ವಿರೋಧಿ ನೀತಿ ಯನ್ನು ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಎಸ್. ಮೂರ್ತಿ ಖಂಡಿಸಿದ್ದು, ಕನ್ನಡ ಸಾಹಿತ್ಯದ ಗಂಧ ಗಾಳಿ ಅರಿಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕ್ರಮದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೂಡಿಗೆಯ ಸೈನಿಕ ಶಾಲೆಯಲ್ಲಿ ಕಸಾಪ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುವೆಂಪು ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡ ಬಳಿಕ ಸೈನಿಕ ಶಾಲೆಯ ಪ್ರಾಂಶುಪಾಲರಿಗೆ ಬರೆದು ಕಳಿಸಿರುವ ಕೃತಜ್ಞತಾ ಪತ್ರದಲ್ಲಿ ಕನ್ನಡ ಭಾಷೆಯ ಬದಲಾಗಿ ಆಂಗ್ಲ ಭಾಷೆ ಪದಗಳನ್ನು ಬಳಸಬಾರದು ಎಂಬ ಕನಿಷ್ಠ ಪರಿಜ್ಞಾನವಿಲ್ಲದ ವ್ಯಕ್ತಿಯಿಂದ ಕನ್ನಡ ಸಾಹಿತ್ಯದ ಬಳಕೆ ಹಾಗೂ ಸಂರಕ್ಷಣೆ ಅಸಾಧ್ಯ ಎಂದು ಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡ ಐಚ್ಛಿಕ ವಿಷಯವಿದ್ದು ಕನ್ನಡ ಕಲಿಸುವ ಶಿಕ್ಷಕರು ಇದ್ದಾಗ್ಯೂ ಅಲ್ಲಿನ ಪ್ರಾಂಶುಪಾಲರಿಗೆ ಕಸಾಪ ವಿಳಾಸದ ಪುಟವೊಂದರಲ್ಲಿ ಆಂಗ್ಲ ಭಾಷೆಯಲ್ಲಿ ಪತ್ರ ಬರೆದು ಕಳಿಸುವಾಗ ಕಸಾಪದ ಇತರೇ ಪದಾಧಿಕಾರಿಗಳಿಗೆ ಕನಿಷ್ಠ ಮಾಹಿತಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಲೇವಡಿ ಮಾಡಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪರಿಷತ್ತಿನ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಸ್ವಯಂ ಘೋಷಿತ ಮಾಜಿ ಅಧ್ಯಕ್ಷರು ಈ ಬಗ್ಗೆ ಕ್ರಮ ಜರುಗಿಸುತ್ತಾರಾ ಎಂದು ಮೂರ್ತಿ ಪ್ರಶ್ನಿಸಿದ್ದಾರೆ.
Back to top button
error: Content is protected !!