ಟ್ರೆಂಡಿಂಗ್
ಶ್ರೀಕ್ಷೇತ್ರ ಗದ್ದಿಗೆಯಲ್ಲಿ ಹನುಮಜಯಂತಿ ಮೆರವಣಿಗೆ ಸಂಪನ್ನ.
ಕರೀಮುದ್ದನಹಳ್ಳಿಯಲ್ಲಿ ವಿಶೇಪೂಜೆ, ಹೋಮ-ಹವನ, ಗದ್ದಿಗೆಯಲ್ಲಿ ಬೃಹತ್ ಆಂಜನೇಯ ಮೂರ್ತಿಗಳ ಮೆರವಣಿಗೆ.
ಹುಣಸೂರು:ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಎರಡನೇ ವರ್ಷದ ಹನುಮ ಜಯಂತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಹನುಮಜಯಂತಿ ಅಂಗವಾಗಿ ಗುರುವಾರ ಸಂಜೆ ಕರೀಮುದ್ದನಹಳ್ಳಿ ಸ್ರೀ ರಾಮಮಂದಿರದಲ್ಲಿ ಕೆಂಡಗಣ್ಣಸ್ವಾಮಿ ದೇವಾಲಯದ ಅರ್ಚಕ ಶ್ರೀಹರಿ, ಮಹೇಶ್ ನೇತೃತ್ವದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಸಿ, ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಿದರು.
ಮೆರವಣಿಗೆ: ಶುಕ್ರವಾರ ಮದ್ಯಾಹ್ನ ಕರೀಮುದ್ದನಹಳ್ಳಿಯ ರಾಮಮಂದಿರದ ಬಳಿ ಅಲಂಕೃತ ಟ್ರಾಕ್ಟರ್ ನಲ್ಲಿ ಮೂರು ಬೃಹತ್ ಆಂಜನೇಯ ಮೂರ್ತಿಗಳು ಹಾಗೂ ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿ ಕೆಂಡಗಣ್ಣಸ್ವಾಮಿ ಗದ್ದಿಗೆ ತಂದು ಪ್ರಮುಖ ಬೀದಿಗಳಲ್ಲಿ ವೀಗರಾಸೆ, ಡೊಳಳುಕುಣಿತ, ಮಂಗಳವಾದ್ಯ, ನಗಾರಿಯೊಂದಿಗೆ ಮೆರವಣಿಗೆ ನಡೆಸಿದರು. ನಗಾರಿ ಸದ್ದಿಗೆ ಯುವ ಪಡೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಗೆ ಗದ್ದಿಗೆ ದೇವಾಲಯದ ಪ್ರಧಾನ ಅರ್ಚಕ ಕೆಂಡಗಣ್ಣಪ್ಪ ಪೂಜೆ ನೆರವೇರಿಸಿದ ನಂತರ ವಕೀಲ ಯೋಗಾನಂದಕುಮಾರ್, ಬಿಜೆಪಿ ಮುಖಂಡ ಸೂರ್ಯಕುಮಾರ್, ಹುಣಸೂರು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ರೈತ ಮುಖಂಡ ಚಂದನ್ಗೌಡ ಪುಷ್ಪಾರ್ಚನೆ ಗೈದು ಮೆರವಣಿಗೆಗೆ ಚಾಲನೆ ನೀಡಿದರು.
ಸುತ್ತಮುತ್ತಲ ಗ್ರಾಮಗಳ ವಿವಿಧ ಸಂಘಗಳ ಪ್ರಮುಖರಾದ ಮಧುಗೌಡ, ಚೇತನ್, ಕಾರ್ತಿಕ್, ಶ್ರೀನಿವಾಸ್, ಕುಂಠೇಗೌಡ, ಚಂದನ್ಗೌಡ, ಅಭಿಲಾಷ್, ಸಾಗರ್ ಅನಂತ, ಹಿಂದೂಚಾಗರಣವೇದಿಕೆಯ ಚಂದ್ರಮೌಳಿ ಮತ್ತಿತರರು ಮೆರವಣಿಗೆ ಯಶಸ್ವಿಗೆ ದುಡಿದರು.