ಕುಶಾಲನಗರ, ಏ 02: ಬೇಸಿಗೆಗೆ ಕಾವೇರಿ ನದಿ ಬತ್ತಿ ಹೋಗಿದ್ದು ಕುಡಿವ ನೀರಿನ ಅಭಾವ ಎಲ್ಲೆಡೆ ಮನೆ ಮಾಡಿದೆ. ಈ ನಡುವೆ ನಗರ ನೀರು ಸರಬರಾಜು ಮಂಡಳಿ ಅಗತ್ಯವಿರುವೆಡೆ ಕುಡಿವ ನೀರು ಪೂರೈಕೆಗೆ ಒತ್ತು ನೀಡುವ ಬದಲು ಖಾಸಗಿಯಾಗಿ ಹೋಟೆಲ್ ಲಾಡ್ಜ್ ಗಳಿಗೆ ದುಪ್ಪಟ್ಟು ದರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಕುಶಾಲನಗರ ಪುರಸಭೆ ಸದಸ್ಯ ಎಂ.ಕೆ.ದಿನೇಶ್ ಆರೋಪಿಸಿದ್ದಾರೆ. ಕುಡಿವ ನೀರಿಗೆ ಹಾಹಾಕಾರ ಇರುವ ಕಡೆ ನೀರು ಪೂರೈಸುವ ಬದಲು ಖಾಸಗಿಯವರಿಗೆ ನೀರು ಪೂರೈಕೆ ಖಂಡನೀಯ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ ಎಂದು ಅಗ್ರಹಿಸಿದ್ದಾರೆ.
Back to top button
error: Content is protected !!