ಪ್ರತಿಭಟನೆ

ಕನ್ನಡ‌ ಕಡೆಗಣಿಸಿದ ಎಲ್ಐಸಿ ಸಮಾವೇಶ: ಕರವೇ ಮುತ್ತಿಗೆ

ಕುಶಾಲನಗರ, ಡಿ 18: ಕುಶಾಲನಗರದ ರೈತ ಭವನದಲ್ಲಿ ಎಲ್ಐಸಿಯ ಎರಡು ದಿನಗಳ ದಕ್ಷಿಣ ವಲಯ ಪ್ರತಿನಿಧಿಗಳ ಸಮಾವೇಶದಲ್ಲಿ ಕನ್ನಡ‌ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಟಿ‌.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮುತ್ತಿಗೆ ಹಾಕಿ ಸ್ಥಳೀಯ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಎಲ್ಲಾ ಸ್ವಾಗತ ಫಲಕ ಆಂಗ್ಲಮಯವಾಗಿದೆ. ಕನ್ನಡ ಕಡೆಗಣಿಸಿ ಇಂಗ್ಲಿಷ್ ಮತ್ತು ಹಿಂದಿಗೆ ಭಾಷೆಗೆ ಒತ್ತು ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರವೇ ನಗರಾಧ್ಯಕ್ಷ ಯೋಗೇಶ್ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಪದಾಧಿಕಾರಿಗಳು ಕನ್ನಡ ಭಾಷೆ ಮರೆತು ನಡೆಸುತ್ತಿರುವ ಕಾರ್ಯಕ್ರಮವನ್ನು ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದರು.

ಕೇರಳ ಮತ್ತು ತಮಿಳುನಾಡಿನಿಂದ ಸಮಾವೇಶಕ್ಕೆ
ಎಲ್ಐಸಿ ಏಜೆಂಟರು ಆಗಮಿಸಿದ್ದು ಅವರಿಗೆ ಕನ್ನಡ ಭಾಷೆ ಬಾರದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಏಜೆಂಟರು ಸಮಜಾಯಿಷಿಕೆ‌ ನೀಡಿದರೂ ಸುಮ್ಮನಾಗದ ಕರವೇ ಹೋರಾಟಗಾರರು ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಎಚ್ಚರಿಸಿದರು. ನಂತರ ಸಮಾವೇಶ ಪ್ರಮುಖರು ಅಚಾತುರ್ಯದ ಬಗ್ಗೆ ಕ್ಷಮೆಯಾಚನೆ ಮಾಡಿದರು.
ಈ ಸಂದರ್ಭ ಕರವೇ ರಾಜ್ಯ ಸಂಚಾಲಕಿ ದೀಪ ಪೂಜಾರಿ, ಜಿಲ್ಲಾ ಮಹಿಳಾಧ್ಯಕ್ಷೆ ಜ್ಯೋತಿ ಕುದುಪಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಆನಂದ್ ಗೌಡ, ಮಹಿಳಾ ತಾಲೂಕು ಅಧ್ಯಕ್ಷೆ ಹಾನಗಲ್ ರೂಪ ಗಣೇಶ್, ಕಾರ್ಯದರ್ಶಿ ರಾಕೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಜೈ ಸ್ವಾಮಿ, ತಾಲೂಕು ಸಹ ಸಂಘಟನಾ ಕಾರ್ಯದರ್ಶಿ ಪವನ್, ನಗರ ಮಹಿಳಾಧ್ಯಕ್ಷೆ ಅನಿತಾ ದೇವಾಂಗ, ನಗರ ಘಟಕದ ಉಪಾಧ್ಯಕ್ಷ ರವಿ ಡಿ.ಎನ್, ಕೂಡಿಗೆ ಹೋಬಳಿ ಅಧ್ಯಕ್ಷ ರಾಜೇಶ್ ಹಾಗೂ ಸದಸ್ಯರಾದ ಚಂದ್ರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!