ಕುಶಾಲನಗರ, ಡಿ 18: ಕಳೆದ 12 ವರ್ಷಗಳಿಂದ ಬಸ್ ತಂಗುದಾಣವಿಲ್ಲದೆ ಅನಾನುಕೂಲ ಎದುರಿಸುತ್ತಿದ್ದ ಹಕ್ಕೆ ಗ್ರಾಮಸ್ಥರ ಬೇಡಿಕೆ ಈಡೇರಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಕ್ಕೆ-ಹುಲುಸೆ ಗ್ರಾಮಸ್ಥರು ಬುಧವಾರ ನಡೆಸಿದ ಹೋರಾಟದ ಫಲವಾಗಿ ಗುರುವಾರ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಹಿಂದೆ ಹೆದ್ದಾರಿ ಅಭಿವೃದ್ಧಿ ಸಂದರ್ಭ ನೆಲಸಮಗೊಂಡ ಹಳೆಯ ತಂಗುದಾಣ ಸಮೀಪವೇ ನೂತನ ತಂಗುದಾಣ ನಿರ್ಮಾಣಕ್ಕೆ ಹೆಬ್ಬಾಲೆ ಗ್ರಾಪಂ ಉಪಾಧ್ಯಕ್ಷೆ ಲತಾ, ಸಾಮಾಜಿಕ ಹೋರಾಟಗಾರ ಮೋಹನ್ ಮತ್ತು ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿದರು.
ಹಕ್ಕೆ ಹುಲುಸೆ ಗ್ರಾಮಸ್ಥರು ವಿವಿಧ ಬೇಡಿಕೆಗಳ ಬುಧವಾರ ನಡೆಸಿದ ಹೋರಾಟಕ್ಕೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಚರಂಡಿ ಸ್ವಚ್ಚತೆಗೊಳಿಸಲಾಗಿದೆ. ಹಾರಂಗಿ ಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತಿದೆ, ಕೆರೆಗಳ ಒತ್ತುವರಿ ತೆರವು ಕಾರ್ಯ ಫೆಬ್ರವರಿ ತಿಂಗಳಲ್ಲಿ ಆರಂಭಿಸುವ ಭರವಸೆ ಅಧಿಕಾರಿಗಳು ನೀಡಿದ್ದಾರೆ. ಬಹುಬೇಡಿಕೆಯ ಬಸ್ ತಂಗುದಾಣ ನಿರ್ಮಾಣಕ್ಕೆ ಕುಶಾಲನಗರ ರೋಟರಿ ವತಿಯಿಂದ ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತದೆ. ವಾರದೊಳಗೆ ನೂತನ ತಂಗುದಾಣ ಉದ್ಘಾಟನೆ ನೆರವೇರಿಸಲಾಗುವುದು ಎಂದು ಮೋಹನ್ ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಲೋಕೇಶ್, ಚೆಲುವರಾಜು, ಕೃಷ್ಣಪ್ಪ ಸಂಪತ್ ಮಹೇಶ್ ಮಂಜು ಮತ್ತಿತರರು ಇದ್ದರು.
Back to top button
error: Content is protected !!