ಕುಶಾಲನಗರ, ಸೆ 10: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘ ವರದಿ ಸಾಲಿನಲ್ಲಿ ರೂ 24,59,807.05/- ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.
ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಪ್ರಾರಂಭವಾಗಿ 10 ವರ್ಷ ಸಂದಿದ್ದು ಈ ಹಿನ್ನಲೆಯಲ್ಲಿ 10ನೇ ವಾರ್ಷಿಕ ಮಹಾಸಭೆಯನ್ನು ದಿನಾಂಕ 13-09-2025 ರಂದು ನಡೆಸುತ್ತಿದ್ದೇವೆ. ಸಂಘದ ಪ್ರಾರಂಭದಲ್ಲಿ 782 ಸದಸ್ಯರನ್ನು ಹೊಂದಿದ್ದು ದಿನಾಂಕ 31-03-2025 ಕ್ಕೆ 875 ‘ಎ’ ತರಗತಿ ಸದಸ್ಯರು ಹಾಗೂ 123 ‘ಸಿ’ ತರಗತಿ ಸದಸ್ಯರನ್ನು ಹೊಂದಿರುತ್ತದೆ. 31.03.2025 ಕ್ಕೆ ರೂ 37,29,825/- ಪಾಲು ಬಂಡವಾಳ 2,54,13,196.92/-ಠೇವಣಿ ಹಾಗೂ 18,69,998/- ನಿಧಿಗಳನ್ನು ಹೊಂದಿದ್ದು ಸೇರಿದಂತೆ ಸಂಘದ ಒಟ್ಟು ದುಡಿಯುವ ಬಂಡವಾಳ ರೂ 4,01,56,887.04/- ಇರುತ್ತದೆ. ಸಂಘವು ಸದಸ್ಯರು ಹಾಗೂ ಸದಸ್ಯರೇತರರಿಂದ ಠೇವಣೆಗಳನ್ನು ಸಂಗ್ರಹಿಸುತ್ತಿದ್ದು ಸಂಘದ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತಿದ್ದು ಸದಸ್ಯರು ಹೆಚ್ಚಿನ ಠೇವಣಿಯನ್ನು ಸಂಘದಲ್ಲಿ ತೊಡಗಿಸಲು ಈ ಮೂಲಕ ಕೋರಲಾಗಿದೆ. ಸಂಘವು ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಜಾಮೀನು ಸಾಲ (ಕಂತುಗಳಲ್ಲಿ), ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ ಹಾಗೂ ಪಿಲ್ಮ ಸಾಲಗಳನ್ನು ಸಂಘದ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಕಾಲಕಾಲಕ್ಕೆ ಬಡ್ಡಿಯನ್ನು ಪಲಷ್ಕಲಸುತ್ತಾ ಸದಸ್ಯರಿಗೆ ಕೈಗೆಟಕುವ ಬಡ್ಡಿದರದಲ್ಲಿ ನಾಲ ವಿತರಿಸುತ್ತಿದ್ದು ಸದಸ್ಯರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಬಲರ್ವಧನೆಯನ್ನು ಹೆಚ್ಚಿಸಿಕೊಳ್ಳಲು ಈ ಮೂಲಕ ಸದಸ್ಯರಲ್ಲಿ ಕೋಲಕೆ. ವರದಿ ಸಾಲಿನಲ್ಲಿ ಸಂಘವು ರೂ 24,59,807.05/- ಲಾಭ ಗಳಿಸಿದ್ದು ‘ಎ’ ತರಗತಿಯಲ್ಲಿ ವರ್ಗೀಕರಣವಾಗಿರುವುದಕ್ಕೆ ಸದಸ್ಯರ ಸಹಕಾರವೆ ಮುಖ್ಯ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಸದಸ್ಯರುಗಳಿಗೆ ನಮ್ಮ ಅಭಿನಂದನೆ ಸಲ್ಲಿಸುತ್ತಿದ್ದೇವೆ ಹಾಗೂ ಇದೇ ರೀತಿ ಸಹಕಾರವನ್ನು ಮುಂದೆಯು ಕೂಡ ಸದಸ್ಯರುಗಳಿಂದ ನಿರೀಕ್ಷೆ ಮಾಡುತ್ತೇವೆ.
ನಮ್ಮ ಹಿಂದಿನ ಹಾಗೂ ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ಪ್ರಾಮಾಣಿಕ ಸೇವೆಯಿಂದ ಸಂಘಕ್ಕೆ ಎಲ್ಲಾ ಸೌಕರ್ಯಗಳುಳ್ಳ ಒಂದು ಸುಸಜ್ಜಿತ ಕಟ್ಟಡವನ್ನು ನಮ್ಮ ಸಂಘಕ್ಕೆ ದಾನಿಗಳು ನೀಡಿದ ಉಚಿತ ನಿವೇಶನದಲ್ಲಿ ಸುಸಜ್ಜಿತವಾದ 2 ಅಂತಸ್ತಿನ ಕಟ್ಟಡವನ್ನು ಅಂದಾಜು ರೂ 65,00,000.00 ಗಳಷ್ಟು ವೆಚ್ಚಮಾಡಿ ಭವ್ಯವಾಗಿ ನಿರ್ಮಿಸಿದ್ದು ದಿನಾಂಕ 03.09.2025 ನೇ ಬುಧವಾರದಂದು ಉದ್ಘಾಟನೆಯಾಗಿರುತ್ತದೆ. ಸಂಘದ ಈ ಸಾಧನೆಗೆ ಸಂಘ ಪ್ರಾರಂಭವಾದಾಗಿನಿಂದಲೂ ಮಹಾಸಭೆಯಲ್ಲಿ ತಮ್ಮ ಪಾಲಿನ ಲಾಭಾಂಶವನ್ನು ಸಂಘದ ಕಟ್ಟಡ ನಿಧಿಗೆ ಬಿಟ್ಟುಕೊಟ್ಟ ಸಂಘದ ಸದಸ್ಯರೆಲ್ಲರಿಗೂ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಹಾಗೂ ಸಂಘವು ಪ್ರಾರಂಭವಾಗಿ ತುಂಬಾ ಕ್ಲುಪ್ತ ಅವದಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವುದು ಆಡಳಿತ ಮಂಡಳಿಯ ಪರಿಶ್ರಮ ಹಾಗೂ ಹೆಗ್ಗಳಿಕೆಯಾಗಿರುತ್ತದೆ ಸದ್ರಿ ಕಟ್ಟಡ ನಿರ್ಮಾಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವು ನೀಡಿದ ಎಲ್ಲಾ ಮಹನೀಯರುಗಳಿಗೂ ಆಡಳಿತ ಮಂಡಳಿ ಸದಾಕಾಲ ಚಿರಋಣಿಯಾಗಿರುತ್ತದೆ.
ಈ ರೀತಿ ಸತತವಾಗಿ 10 ವರ್ಷಗಳ ಕಾಲವು ಲಾಭದಲ್ಲಿ ಮುನ್ನಡೆಯುತ್ತಿರುವುದಕ್ಕೆ ಸದಸ್ಯರ ಸಹಕಾರ ಹಿಂದಿನ ಆಡಳಿತ ಮಂಡಳಿಯ ಕಾರ್ಯಚರಣೆ, ಸಿಬ್ಬಂದಿಗಳ ಶ್ರಮ ಹಾಗೂ ಇಲಾಖೆಯ ನಿರ್ದೇಶನಗಳು ಕೂಡ ಸಂಘಕ್ಕೆ ಪೂರಕವಾಗಿರುವುದಕ್ಕೆ ನಾವು ಅವರುಗಳಿಗೆಲ್ಲ ಅಭಿನಂದನೆ ಸಲ್ಲಿಸುತ್ತವೆ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಬಿ.ಜಗದೀಶ್, ನಿರ್ದೇಶಕರಾದ ರಾಜು, ರವಿಕುಮಾರ್, ಹೇಮಕುಮಾರ್, ಎಂ.ಡಿ.ರಮೇಶ್, ಕಸ್ತೂರಿ ಮಹೇಶ್, ರೇಖಾ ಸಿಇಒ ಸುನಿತಾ ಇದ್ದರು.
Back to top button
error: Content is protected !!