ಕುಶಾಲನಗರ ಡಿ 30 : ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವು ಕೂಡಿಗೆಯ ಸರಕಾರಿ ಪದವಿಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯರಾದ ಗೌರಮ್ಮಣಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಹಕರು ಜಾಗೃತರಾಗಿ ಗ್ರಾಹಕರ ರಕ್ಷಣೆಯ ಕಾಯ್ದೆಗಳನ್ನು ತಿಳಿಯುವ ಮೂಲಕ ತಮ್ಮ ವಸ್ತುಗಳನ್ನು ಖರೀದಿಸುವಲ್ಲಿ ಕಾನೂನಿನ ಅರಿವು ಮುಖ್ಯವಾಗಿರುತ್ತದೆ. ಇಂತಹ ಸಭೆಗಳು ಇಂದಿನ ಯುವ ಜನಾಂಗಕ್ಕೆ ಬಹು ಮುಖ್ಯ ಅಂಶವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಹಾರ ಆಯೋಗದ ಅಧ್ಯಕ್ಷೆ ರೇಣುಕಾಂಭ ಮಾತನಾಡಿ, ಗ್ರಾಹಕರ ವ್ಯಾಜ್ಯಗಳ ಆಯೋಗದ ಮೂಲಕ ಇಂದಿನ ಸಮಾಜದ ಯುವಕ, ಯುವತಿಯರು ಸಮಗ್ರವಾದ ಮಾಹಿತಿಯನ್ನು ತಿಳಿದುಕೊಂದು ಆನ್ಲೈನ್ ಮೂಲಕ ಖರೀದಿಸುವ ವಸ್ತುಗಳ ಖರೀದಿಗೆ ಮುಂದಾಗಬೇಕಾಗಿದೆ. ವಿದ್ಯಾರ್ಥಿಗಳು ಸಹ ಡಿಜಿಟಲ್ ವ್ಯಾಪಾರಿಕರಣ ಸಂದರ್ಭಗಳಲ್ಲಿ ಅನುಸರಿಸಬೇಕಾದ ನಿಯಮ, ಮತ್ತು ಅದರಿಂದಾಗುವ ಸಮಸ್ಯೆಗಳ ಪರಿಹಾರಗಳು, ನ್ಯಾಯಾಲಯದಲ್ಲಿ ದಾವೆ ಹೂಡುವ ಬಗ್ಗೆ ಅದರಿಂದ ಪರಿಹಾರ ಸಿಗುವ ಬಗ್ಗೆ ಮಾಹಿತಿ ಒದಗಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಕಾಲೇಜು ಪ್ರಾಂಶುಪಾಲ ಡಾ. ಬಸಪ್ಪ, ಕುಶಾಲನಗರದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎ. ಎ. ಚಂಗಪ್ಪ, ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಡಿ. ಆರ್. ಲಿಂಗರಾಜು, ಮೈಸೂರು ಗ್ರಾಹಕರ ಪರಿಷತ್ ಕಾರ್ಯನಿರ್ವಾಹಕ ಸದಸ್ಯ ರವಿ ಬಳೆ ಹಾಜರಿದ್ದರು.
ತೂಕ,ಅಳತೆ ಮತ್ತು ಕಾನೂನು ಇಲಾಖೆಯ ವತಿಯಿಂದ ಇಲಾಖೆಯ ವಸ್ತುಗಳ ಪ್ರದೇಶದ ಏರ್ಪಡಿಸಲಾಗಿತು.
ಕಾಲೇಜು ಕನ್ನಡ ಉಪನ್ಯಾಸಕ ರವೀಶ್ ಕಾರ್ಯಕ್ರಮ ನಿರೂಪಿಸಿ, ಕುಮುದಾ ಶರಶ್ ಸ್ವಾಗತಿಸಿ, ಕುಶಾಲನಗರ ತಾಲ್ಲೂಕು ಅಹಾರ ನಿರೀಕ್ಷಕಿ ಸ್ವಾತಿ ವಂದಿಸಿದರು.
Back to top button
error: Content is protected !!