ಕುಶಾಲನಗರ, ಡಿ 20: ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಗುಡ್ಡೆಹೊಸೂರು ಹಾಗೂ ಕೂಡುಮಂಗಳೂರು ಗ್ರಾಮದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿತು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳು, ಸೌಲಭ್ಯಗಳ ಬಗ್ಗೆ ಎಲ್ ಇ ಡಿ ಪರದೆ ಮೂಲಕ ವಿಡಿಯೋ ಪ್ರದರ್ಶಿಸಿ ನೆರೆದಿದ್ದವರಲ್ಲಿ ಅರಿವು ಮೂಡಿಸಲಾಯಿತು. ಸರಕಾರದ
ಸೌಲಭ್ಯ ಪಡೆದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಎಸ್ ಬಿ ಐ ಶಾಖೆ ಹಾಗೂ ಗುಡ್ಡೆಹೊಸೂರು ಕೊಡಗು ಗ್ರಾಮೀಣ ಬ್ಯಾಂಕ್ ಶಾಖೆ ವ್ಯವಸ್ಥಾಪಕರಾದ ಪವಿತ್ರ ಹಾಗೂ ಪ್ರದೀಪ್ ಅವರು ಮಾತನಾಡಿ, ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಅರಿತುಕೊಂಡು ಆಯಾ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ
ಯೋಜನೆಯ ಫಲ ಪಡೆದುಕೊಳ್ಳಬೇಕಿದೆ. ಇಲಾಖೆ ಮತ್ತು ಫಲಾನುಭವಿಗಳ ನಡುವೆ ಮದ್ಯವರ್ತಿಯಾಗಿ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಈ ಮೂಲಕ ಅರ್ಹ ಫಲಾನುಭವಿಗಳು ತಮ್ಮ ಜೀವನೋಪಾಯ, ಆರ್ಥಿಕ ಅಭಿವೃದ್ಧಿ ಕಂಡುಕೊಳ್ಳಲು ಸಾಧ್ಯ ಎಂದರು.
ಕುಶಾಲನಗರ ಭಾರತ್ ಗ್ಯಾಸ್ ಮಾಲೀಕ ಎಂ.ಕೆ.ದಿನೇಶ್, ವ್ಯವಸ್ಥಾಪಕ ಶ್ರೀಧರ್, ಸಂಕಲ್ಪ ಯಾತ್ರೆ ಸಂಚಾಲಕ ಸ್ವಸ್ತಿಕ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
Back to top button
error: Content is protected !!