ಕುಶಾಲನಗರ, ಡಿ 13
ನಂಜರಾಯಪಟ್ಟಣ ಗ್ರಾಪಂ ವತಿಯಿಂದ 2023-24ನೇ ಸಾಲಿನ ಪಂಚಾಯ್ತಿ ನಿಧಿಯಿಂದ
ದುಬಾರೆ ಜಂಕ್ಷನ್ ಮತ್ತು ಹೊಸಪಟ್ಟಣದಲ್ಲಿ ತಲಾ ಎರಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹೈಟೆಕ್ ಬಸ್ ತಂಗುದಾಣಗಳನ್ನು ಉದ್ಘಾಟಿಸಲಾಯಿತು.
ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರುಗಳು ನೂತನ ತಂಗುದಾಣಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆ ಇಂದು ಸಾಕಾರಗೊಂಡಿದೆ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಹಾಗೂ ಗಿರಿಜನ ಹಾಡಿ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕ ವರ್ಗಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಹೈಟೆಕ್ ತಂಗುದಾಣ ನಿರ್ಮಿಸಲಾಗಿದೆ.
ಹೊಸಪಟ್ಟಣದಲ್ಲಿ ಮರಗಳ ಅಡಿಯಲ್ಲಿ ನಿಂತು ಬಸ್ ಗೆ ಕಾಯಬೇಕಿದ್ದ ಪರಿಸ್ಥಿತಿ ದೂರವಾಗಿದೆ. ಎಲ್ಲರೂ ಕೂಡ ತಂಗುದಾಣದಲ್ಲಿ ಶುಚಿತ್ವ ಕಾಪಾಡುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಪಿ.ಎನ್.ಕುಸುಮ, ಸದಸ್ಯರಾದ ಎ.ಎಂ.ಲೋಕನಾಥ್, ಆರ್.ಕೆ.ಚಂದ್ರ, ಮಾವಾಜಿ ರಕ್ಷಿತ್, ಗಿರಿಜಮ್ಮ, ಎಸ್.ಎಂ.ಸಮೀರ, ಜೆ.ಟಿ.ಜಾಜಿ, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಗ್ರಾಮದ ಪ್ರಮುಖರಾದ ಕೆ.ಆರ್.ಗಣಪತಿ, ಕಾಳಯ್ಯ, ಅಬ್ದುಲ್ಲಾ, ಅಮೀರ್, ರತೀಶ್, ಕಲ್ಲೇಗೌಡನ ಸುರೇಶ್, ಅಡ್ನಳ್ಳಿ ಸತೀಶ್, ಭೋಜಮ್ಮ,
ಹೊಸಪಟ್ಟಣ ಗಿರಿಜನ ಹಾಡಿಯ ಶಿವು, ನಾಗೇಶ್, ಅಪ್ಪುಣ್ಣಿ ಸೇರಿದಂತೆ ದುಬಾರೆ ರಿವರ್ ರಾಫ್ಟ್ ಸಿಬ್ಬಂದಿಗಳು, ಸಂಜೀವಿನ ಒಕ್ಕೂಟ, ಪಂಚಾಯತ್ ಸಿಬ್ಬಂದಿಗಳು ಇದ್ದರು.
Back to top button
error: Content is protected !!