ಕಾರ್ಯಕ್ರಮ

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮ

ಕುಶಾಲನಗರ ಡಿ11: ಯೋಗದಿಂದ ಬಹಳಷ್ಟು ಖಾಯಿಲೆಗಳನ್ನು ಗುಣಪಡಿಸಬಹುದು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ಡಿಸೋಜ ಹೇಳಿದರು..
ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಜಂಟಿಯಾಗಿ ಸೋಮವಾರ ಆಯೋಜಿಸಿದ ” ಯುವ ಮಾನಸಿಕ ಆರೋಗ್ಯದ ನಿರ್ವಹಣೆಗೆ ತಂತ್ರಗಳು’ ಎಂಬ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಎನ್ನುವುದು ಗುರುಗಳಿಂದ ಕಲಿಯಬೇಕೆ ವಿನ; ದೂರದರ್ಶನ ಅಥವಾ ಪುಸ್ತಕಗಳಿಂದ ಕಲಿಯಬಾರದು.ಯೋಗ ಮಾಡುವಾಗ ಆಗುವ ತಪ್ಪುಗಳನ್ನು ಗುರು ಸರಿಪಡಿಸಲು ಸಾದ್ಯವೇ ಹೊರತು ಸಾಮಾಜಿಕ ಜಾಲಾತಾಣದಲ್ಲಲ್ಲ ಎಂಬುದನ್ನು ಮನವರಿಕೆ ಮಾಡಿದ ಅವರು, ಯೋಗಾಭ್ಯಾಸವನ್ನು ಮುಂಜಾನೆಯ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಮಾಡಬೇಕೇ ಹೊರತು ತಮಗೆ ಸಿಕ್ಕಿದ ಸಮಯದಲ್ಲಿ ಮಾಡಬಾರದು.ಏಕೆಂದರೆ ಮುಂಜಾನೆ ಪ್ರಶಾಂತವಾದ ವಾತಾವರಣ ಮತ್ತು ಮನುಷ್ಯನ ಅಂಗಾಂಗಗಳು ಧನಾತ್ಮಕವಾಗಿ ಆ ಸಮಯದಲ್ಲಿ ವರ್ತಿಸುತ್ತದೆ ಎಂದರು.
ಈ ಯೋಗದಿಂದ ಮಾನಸಿಕ ನೆಮ್ಮದಿ, ಶಾಂತತೆ, ಧನಾತ್ಮಕ ನಿಲುವು, ಮನಸಿಗೆ ಉಲ್ಲಾಸ ನೀಡುವುದರೊಂದಿಗೆ ಮಕ್ಕಳ ಓದುವಿಕೆಯಲ್ಲಿ ಆಸಕ್ತಿ ‌ಮೂಡಿಸುತ್ತದೆ ಎಂದರು.
ಕುಶಾನಗರ ಸರ್ಕಾರಿ ಪದವಿ ಕಾಲೇಜಿನ‌ ದೈಹಿಕ ಶಿಕ್ಷಣ ನಿರ್ದಶಕಿ ಪಿ.ಪಿ. ಜಯಂತಿ ಮಾತನಾಡಿ, ಮನುಷ್ಯನ ಮಾನಸಿಕ, ದೈಹಿಕ ಸದೃಡತೆಗೆ ಯೋಗ ಅತ್ಯಗತ್ಯ.ಅದರಲ್ಲೂ ವಿದ್ಯಾರ್ಥಿ ದಿಸೆಯಲ್ಲಿ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ನಂತರ ಎವರೆಸ್ಟ್ ಡಿಸೋಜ ಅವರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ‌ಯೋಗದ ಭಂಗಿಗಳನ್ನು ಪ್ರದರ್ಶಿಸಿ ತರಬೇತಿ ನೀಡುವ ಮೂಲಕ ಯೋಗ ದಿನಕ್ಕೆ ಮಹತ್ವ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು.
ಸಹಪ್ರಾಧ್ಯಾಪಕರಾದ ಡಾ.ಬಿ.ಡಿ.ಹರ್ಷ, ಟಿ.ಎಂ.ಸುಧಾಕರ್, ಕೆ‌.ಪಿ. ಕುಸುಮ, ಎಸ್.ಸುನಿಲ್ ಕುಮಾರ್, ಕೆ.ಆರ್.ವಂದನ, ರಶ್ಮಿ, ಟಿ.ಎಂ.ದೀಪಾ, ಮಧುಶ್ರೀ, ಪಿ.ರಮೇಶ್ ಚಂದ್ರ, ಡಾ.ರಾಧಿಕ, ನಟರಾಜ್, ಮಹಾದೇವ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!