ಕುಶಾಲನಗರ ನ. 14: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಕೊಡಮಾಡುವ 2023 ನೇ ಸಾಲಿನ ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ‘ಗೆ ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಆಯ್ಕೆಯಾಗಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಅಂಗವಾಗಿ ನೀಡುವ ಪ್ರಶಸ್ತಿಗೆ ಕುಶಾಲನಗರದ ಬಿ.ಎಸ್. ಲೋಕೇಶ್ ಸಾಗರ್ ಅಯ್ಕೆಯಾಗಿರುತ್ತಾರೆ.
ಕನ್ನಡ ಸಾಹಿತ್ಯ, ನಾಡು ನುಡಿ ,ಸಂಘಟನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಅನುಪಮ, ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿರುವುದು, ಹಾಗೂ ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಮೇಲಿನ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಎಸ್. ಎಸ್ ಎಲ್ ಸಿ. ಪರೀಕ್ಷೆ ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಅಪರಂಜಿ ಎರಡು ಗ್ರಾಂ ತೂಕದ ಚಿನ್ನದ ನಾಣ್ಯವನ್ನು ಕೊಡುತ್ತಿದನ್ನು ಇಲ್ಲಿ ಸ್ಮರಿಸಬಹುದು. ನಂತರ ದಿನಗಳಲ್ಲಿ ಕೊಡಗು ಕನ್ನಡ ಸಾಹಿತ್ಯ ಅಧ್ಯಕ್ಷಾಗಿದ್ದ ಸಂದರ್ಭದಲ್ಲಿ ಪ್ರೌಢಶಾಲಾ , ಪದವಿಪೂರ್ವ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಮಾತಾನಾಡುವ, ( ಭಾಷಣ) ಹಾಗೂ ಶುದ್ಧ ಕನ್ನಡ ಬರೆಯುವ( ಪ್ರಬಂಧ) ಸ್ಪರ್ಧೆ ನಡೆಸಿ ಅಲ್ಲಿಯೂ ಎರಡು ಗ್ರಾಂ ತೂಕದ ಅಪರಂಜಿ ಚಿನ್ನದ ನಾಣ್ಯವನ್ನೇ ಬಹುಮಾನವಾಗಿ ನೀಡಿದನ್ನು ಇಲ್ಲಿ ಸ್ಮರಿಸಬಹುದು.
ಇವರು ಅನ್ನದಾತರ ಮೇಲೆ ಪ್ರೀತಿ ಗೌರವ ದೊಂದಿಗೆ ಸಾಹಿತ್ಯ ಪರಿಷತ್ತಿನ ಅವಧಿಯಲ್ಲಿ ಶಿರಂಗಾಲ ಗ್ರಾಮದಲ್ಲಿ ರೈತರ ಹೆಸರಿನಲ್ಲೇ ಕೃಷಿ ಸಾಹಿತ್ಯ ಸಮಾವೇಶದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದು, ಕೊಡಗು ಜಿಲ್ಲಾ ಕನ್ನಡ ಪರಿಷತ್ತು ವಿನೂತನ ಕಾರ್ಯಕ್ರಮಗಳಾದ ಮಕ್ಕಳ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳ, ಯುವ ಸಾಹಿತ್ಯ ಸಮಾವೇಶ, ವಚನ ಸಾಹಿತ್ಯ ಸಮಾವೇಶ, ದಾಸ ಸಾಹಿತ್ಯ ಸಮ್ಮೇಳನ, ಸೇರಿದಂತೆ ಅನೇಕ ವಿನೂತನ ಕಾರ್ಯಕ್ರಮಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯಕ್ಕೆ ಪ್ರಥಮವಾಗಿ ನೀಡುವ ಮೂಲಕ ಮುನ್ನುಡಿಯಾಗಿದನ್ನು ಇಲ್ಲಿ ನೆನಪಿಸಬಹುದು. ಅವರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅವಧಿಯಲ್ಲಿ ಕೊಡಗು ಜಿಲ್ಲಾಧ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳಿಗೆ ಸುಮಾರು 7,200 ಪುಸ್ತಕಗಳನ್ನು ಉಚಿತವಾಗಿ ನೀಡುವುದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೇಮವನ್ನು ಬೆಳೆಸಿದ ಕೀರ್ತಿ ಇವರದಾಗಿರುತ್ತದೆ. ಗಾಯನ ಕ್ಷೇತ್ರದಲ್ಲಿ ಗುರುತಿಸಿಗೊಂಡಿರುವ ಇವರು ರಾಜ್ಯಾದ್ಯಂತ ಹಲವಾರು ಕನ್ನಡ ಗೀತಗಾಯನ ನೆಡೆಸಿದುದಲ್ಲದೆ, ದಹಲಿ, ಮುಂಬಯಿ , ಕೋಚೀನ್, ಕನ್ನಡ ಸಂಘಗಳು ಸೇರಿದಂತೆ ದೂರದ ಬೈರಾನ್ ದೇಶದಲ್ಲಿ ಕನ್ನಡ ಸಂಘಗಳು ಇವರು ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಅಯೋಚಿಸಿದನ್ನು ಇಲ್ಲಿ ಸ್ಮರಿಸಬಹುದು. ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ದೊಡ್ಡ ರಂಗೇಗೌಡ, ಡಾ. ನಲೂರು ಪ್ರಸಾದ್, ಕೊಡವ ಸಾಹಿತ್ಯ ಬಚರಣ್ಣಿರಂಡ ಅಪ್ಪಣ್ಣ ಸೇರಿದಂತೆ ಪ್ರಸಿದ್ಧ ಸಾಹಿತಿಗಳ ರಚನೆ ಗೀತೆಗಳನ್ನು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಧ್ವನಿ ಮುದ್ರಿಕೆಗಳಿಗೆ ಹಾಡಿರುವ ಕೀರ್ತಿ ಇವರದಾಗಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರ ರಾಗಿರುವ ಇವರಿಗೆ ಜಿಲ್ಲಾ, ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದ್ದು ಕೊಡಗು ಜಿಲ್ಲಾಡಳಿತದ ವತಿಯಿಂದ ನೀಡಿದ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಹಿಂದೆ ಪಡೆದಿರುತ್ತಾರೆ.
ಇವರಿಗೆ ಇದೇ ತಿಂಗಳ 19 ರಂದು ಶಿವಮೊಗ್ಗ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕರುನಾಡು ಸಾಮರಸ್ಯ ಕಾವ್ಯ ಸಮ್ಮೀಲನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
Back to top button
error: Content is protected !!