ಕುಶಾಲನಗರ ನ 13 : ಸಾಮರಸ್ಯ ವೇದಿಕೆ ಮತ್ತು ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನ ಮತ್ತು ಶನೇಶ್ವರ ದೇವಸ್ಥಾನ ಸಮಿತಿ ಸಂಯುಕ್ತ ಆಶಯದಲ್ಲಿ ಸಾಮರಸ್ಯ ಉದ್ದೇಶದಿಂದ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಮಾರಿಯಮ್ಮ ದೇವಸ್ಥಾನದ ದೀಪಾದಿಂದ ಪಕ್ಕದಲ್ಲಿರುವ ಅಂಬೇಡ್ಕರ್ ಕಾಲೋನಿಯ ಮನೆ ಮನೆಗೆ ದೀಪ ಪ್ರಜ್ವಲನದೊಂದಿಗೆ ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ನಡೆಯಿತು.
ಭಜನೆ, ದೀಪ ಪೂಜೆ, ಹಿರಿಯ ಧಾರ್ಮಿಕ ಮುಖಂಡರಿಂದ ಹಿತನುಡಿಯ ನಂತರ ಸಹ ಭೋಜನ
ಕಾರ್ಯಕ್ರಮ ನೆರವೇರಿತು.
ಮಾರಿಯಮ್ಮ ದೇವಸ್ಥಾನ ಸಮಿತಿ ಪ್ರಮುಖರಾದ ರಾಮದಾಸ್, ನಾಗೇಂದ್ರ ಗುಪ್ತ ಶನೇಶ್ವರ ದೇವಸ್ಥಾನದ ಪ್ರಮುಖರಾದ ನಾಗಮ್ಮ, ಬುದ್ಧ ಪ್ರತಿಷ್ಠಾನದ ರಾಜ್ಯ ಪ್ರಮುಖ ಶಿವಕುಮಾರ್, ಸಾಮರಸ್ಯ ವೇದಿಕೆ ಪ್ರಮುಖರಾದ ಜನಾರ್ಧನ್, ಮಧುಸೂದನ್, ರಮೇಶ್, ಜಿ.ಎಲ್. ನಾಗರಾಜ್, ಅಮೃತ್ ರಾಜ್, ಚರಣ್, ದಿನೇಶ್, ಹರೀಶ್ ತಮ್ಮಯ್ಯ, ಸದಾಶಿವ ಮತ್ತು ಸ್ಥಳೀಯ ಮುಖಂಡರು ಇದ್ದರು.
Back to top button
error: Content is protected !!