ಧಾರ್ಮಿಕ

ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶಿವದೀಕ್ಷಾ ಕಾರ್ಯಕ್ರಮ

ಕುಶಾಲನಗರ, ನ 02: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶಿವದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬ್ಯಾಡಗೊಟ್ಟದ ಸೇವಬಸತಿ ಆವರಣದಲ್ಲಿ‌ ನಡೆದ ಕಾರ್ಯಕ್ರಮದಲ್ಲಿ
ಶೃಂಗೇರಿ‌ ಸಮೀಪದ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠಂ ನ ಪೀಠಾಧ್ಯಕ್ಷರಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಪಾಲ್ಗೊಂಡು‌ ಧಾರ್ಮಿಕ‌ ಪ್ರವಚನ‌ ನೀಡಿದರು.
ಜೀವನದಲ್ಲಿ ಕಷ್ಟ ಸುಖಗಳ ನಮ್ಮ‌ ಪುರುಷ ಪ್ರಯತ್ನ‌ ಹಾಗೂ ವಿಧಿಯ ಫಲಗಳು.ಜೀವನದಲ್ಲಿ‌ ಸದಾ ಪ್ರಾಮಾಣಿಕ ಪ್ರಯತ್ನ, ಉತ್ತಮ‌ ಚಿಂತನೆ, ಭಗವಂತನಲ್ಲಿನ ನಂಬಿಕೆ ಹೊಂದಿದಲ್ಲಿ ಜೀವನದಲ್ಲಿ ಹೆಚ್ಚಿನ ಶಾಂತಿ, ಸುಖ,‌ನೆಮ್ಮದಿ‌ ಹೊಂದಲು ಸಾಧ್ಯ ಎಂದರು. ಮನಶುದ್ದಿ ಭಗವಂತನ ನಿರಂತರ ಆರಾಧನೆಯಿಂದ ಸಾಧ್ಯ. ಸುಖ‌ದುಃಖಗಳಿಗೆ ಮೂಲವಾದ‌ ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳುವುದು‌ ಮುಖ್ಯ. ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಜೀವನ ಸುಭೀಕ್ಷವಾಗಲು, ಶಿವನ ಅನುಗ್ರಹ ಪಡೆದುಕೊಳ್ಳಲು ಶಿವದೀಕ್ಷೆ ಅನುಕೂಲವಾಗಲಿದೆ ಎಂದರು.

ಸಿದ್ದಲಿಂಗಪುರದ ಮಂಜುನಾಥಸ್ವಾಮಿ‌ ದೇವಾಲಯದ ಶ್ರೀ ರಾಜೇಶನಾಥ್ ಸ್ವಾಮೀಜಿ ಮಾತನಾಡಿ, ಧರ್ಮಾತೀತ ಭಾವನೆಯಿಂದ ಬಾಳಬೇಕೆಂಬುದು ಹಿಂದೂ ಧರ್ಮದ ಸಂಘಟಕರು, ವನವಾಸಿ ಕಲ್ಯಾಣ ವೇದಿಕೆಯ ಸುದ್ದುದ್ದೇಶ.

ಶಾಂತಿಯಿಂದ ಬದುಕು ಕಟ್ಟಿಕೊಳ್ಳಲು, ದೇಶ ಸಂರಕ್ಷಣೆಗೆ ನಮ್ಮ‌ ಧರ್ಮ ಆಚಾರ, ವಿಚಾರಗಳನ್ನು ಪಾಲಿಸಿ, ಹಿರಿಯರು ಹಾಕಿಕೊಟ್ಟ ತಳಹದಿ‌ ಮೇಲೆ ನಡೆದಲ್ಲಿ ಭಾರತ ಹಾಗೂ ಧರ್ಮ ಕಟ್ಟುವ ಕೆಲಸ ಆಗಬೇಕಿದೆ. ಎಲ್ಲರೂ ಭಾರತಾಂಭೆ ಮಕ್ಕಳಾಗಿ ಬಾಳುವಂತಾಗಬೇಕು ಎಂದರು.

ಹರಿಹರಪುರ ಮಠದ ಆಡಳಿತಾಧಿಕಾರಿ ಡಾ.ಬಿ.ಎಸ್.ರವಿಶಂಕರ್, ತಾಲೂಕು ವನವಾಸಿ ಕಲ್ಯಾಣ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಣ್ಣ, ತಾಲೂಕು ಕಾರ್ಯದರ್ಶಿ ಎಂ.ಬಿ.ಹರ್ಷ, ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್, ಉದ್ಯಮಿ ಬಿ.ಆರ್.ಜನಾರ್ಧನ ವಶಿಷ್ಠ, ಕುಶಾಲನಗರ ಅರ್ಚಕರ ಸಂಘದ ಪ್ರಮುಖ ಆರ್.ಕೆ.ನಾಗೇಂದ್ರ,

ಹಿಂದೂಪರ ಸಂಘಟನೆ ಪ್ರಮುಖರಾದ ಅಮೃತ್ ರಾಜ್, ಮಹೇಶ್ ಅಮೀನ್, ಶಿಬಿರದ ಹಿರಿಯರಾದ ಭೋಜ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!