ಕ್ರೈಂ

ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿ ಕಿಡ್ನಾಪ್ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ

ಕುಶಾಲನಗರ, ಸೆ 19: ಮತ್ತಿಕಾಡು ಗ್ರಾಮದ ಅತ್ತೂರು-ನಲ್ಲೂರು ಗೇರುಬಾಣೆ ಬಿ ಎಸ್ಟೇಟ್‌ನ ಲೈನುಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯನ್ನು ಅದೇ ಲೈನ್‌ ಮನೆಯಲ್ಲಿ ವಾಸವಿದ್ದ ಅಸ್ಸಾಂ ರಾಜ್ಯ ಮೂಲದ ಸುರಜ್ @ ಸುರಸ್ ಅಲಿ ಎಂಬಾತನು ಕಿಡ್ನಾಪ್ ಮಾಡಿರುವ ಹಿನ್ನೆಲೆಯಲ್ಲಿ ಸುರಜ್ @ ಸುರಸ್ ಅಲಿ ಎಂಬಾತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ದಿನಾಂಕ: 09-08-2021 ರಂದು ದೂರು ಸ್ವೀಕರಿಸಿದ್ದು, ಸುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 363, 306 ಐಪಿಸಿ & 6 ಪೋಕೋ ಆಕ್ಟ್, & 3(2)(ಎ) ಎಸ್ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ದಿನಾಂಕ: 11-08-2021 ರಂದು ಆರೋಪಿ ಸುರಜ್ @ ಸುರಸ್ ಅಲಿಯನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಶೈಲೇಂದ್ರ ಹೆಚ್.ಎಂ, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ ಮತ್ತು ಸಿಬ್ಬಂದಿಯವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ಸುರಜ್ @ ಸುರಸ್ ಅಲಿ ವಿರುದ್ಧ ದೋಷಾರೋಪಣ ಪತ್ರವನ್ನು ದಿ: 28-09-2021 ರಂದು ಘನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ: 17-09-2024 ರಂದು ಸದರಿ ಪ್ರಕರಣದ ಆರೋಪಿಯಾದ ಸುರಜ್ @ ಸುರಸ್ ಅಲಿ, 22 ವರ್ಷ ಇತನಿಗೆ ಕಲಂ: 363, ಐಪಿಸಿ 3(2)(ವಿ) ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಒಟ್ಟು 05 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 5,000/- ಗಳ ದಂಡ ಹಾಗೂ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 06 ತಿಂಗಳ ಜೈಲು ಶಿಕ್ಷೆವನ್ನು ವಿಧಿಸಿ ಘನ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಜಿ.ಪ್ರಶಾಂತಿ ರವರು ತೀರ್ಪು ನೀಡಿರುತ್ತಾರೆ.

ಸದರಿ ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ ಶೈಲೇಂದ್ರ ಹೆಚ್.ಎಂ. ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ ಹಾಗೂ ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ ದೇವೇಂದ್ರಎನ್.ಪಿ ರವರು ಸದರಿ ಮೇಲ್ಕಂಡ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ಉತ್ತಮವಾಗಿವಾದ ಮಂಡಿಸಿ ಶಿಕ್ಷೆಯನ್ನು ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.

ಶ್ರೀ ಶೈಲೇಂದ್ರ ಹೆಚ್.ಎಂ, ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ ಹಾಗೂ ಸಿಬ್ಬಂದಿಗಳು ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ ದೇವೇಂದ್ರಎನ್.ಪಿ ರವರಿಗೆ ಹಾಗೂ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಜಿ.ಪ್ರಶಾಂತಿ, ಘನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ರವರಿಗೆ ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us