ಕುಶಾಲನಗರ,ಸೆ೨೬: ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ನ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕುಶಾಲನಗರದ ಶರೀಫ್ ಅವರು ಆಯ್ಕೆಯಾಗಿದ್ದಾರೆ.
ಸೋಷಿಯಲ್ ಡೆಮಾಕ್ರೆಟಿಕ್ ಡ್ರೇಟ್ ಯೂನಿಯನ್ ನ ಜಿಲ್ಲಾಧ್ಯಕ್ಷರಾದ ಶರೀಫ್ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಶರ್ಫುದ್ಧೀನ್, ಪ್ರಧಾನ ಕಾರ್ಯದರ್ಶಿಯಾಗಿ ಕಂಡಕೆರೆಯ ಮುಹಮ್ಮದ್ ಅಲಿ, ಕಾರ್ಯದರ್ಶಿಯಾಗಿ ಕೂಡಿಗೆಯ ಅಲಿ, ಖಜಾಂಜಿಯಾಗಿ ಕೊಡ್ಲಿಪೇಟೆಯ ಖಾದರ್, ಸಮಿತಿ ಸದಸ್ಯರುಗಳಾಗಿ ಶುಂಟಿಕೊಪ್ಪದ ಅಬ್ದುಲ್ಲಾ, ಮಡಿಕೇರಿಯ ಶಕೀಲ್, ಕೊಡ್ಲಿಪೇಟೆಯ ಸತ್ತಾರ್, ಗೊಂದಿಬಸವನಹಳ್ಳಿಯ ರಫೀಕ್, ಸೋಮವಾರಪೇಟೆಯ ರಹೀಂ ಬೇಗ್, ಮಡಿಕೇರಿಯ ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಮಂಡಳಿಗೆ ಎಸ್.ಡಿ.ಟಿ.ಯು ಹಾಗೂ ಎಸ್.ಡಿ.ಪಿ.ಐ ಅಭಿನಂದಗಳನ್ನು ಸಲ್ಲಿಸಿದ್ದು, ಕಾರ್ಮಿಕರ ಪರವಾಗಿ ಧ್ವನಿಯೆತ್ತುವಂತೆ ಆಗ್ರಹಿಸಿದೆ.
ಈ ಸಂದರ್ಭ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಖಲೀಲ್, ಎಸ್.ಡಿ.ಪಿ.ಐ ಮಡಿಕೇರಿ ಅಸೆಂಬ್ಲಿ ಅಧ್ಯಕ್ಷ ಉಸ್ಮಾನ್, ಸಂಘಟನಾ ಕಾರ್ಯದರ್ಶಿ ಕಬೀರ್, ಖಜಾಂಜಿ ಅಬ್ದುಲ್ಲಾ, ಎಸ್.ಡಿ.ಟಿ.ಯು ನ ಉಪಾಧ್ಯಕ್ಷ ರಜ಼ಾಕ್, ಕಾರ್ಯದರ್ಶಿ ಹಸೀನಾ, ಸದಸ್ಯರಾದ ಯೂಸುಫ್, ಜಲೀಲ್ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!