ಸಭೆ

ಡಿ.22: ಅದ್ದೂರಿ ಹನುಮ ಜಯಂತಿ ಆಚರಣೆಗೆ ಪೂರ್ವ ತಯಾರಿ

ಕುಶಾಲನಗರ ಅ 15: ಕುಶಾಲನಗರದಲ್ಲಿ ಡಿಸೆಂಬರ್ 22 ನೇ ಮಂಗಳವಾರ ಶ್ರದ್ಧಾಭಕ್ತಿಯ ಅದ್ದೂರಿ ಹನುಮ ಜಯಂತಿ ಆಚರಿಸಿಲು ಹನುಮ ಜಯಂತಿ ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ನೇತೃತ್ವದಲ್ಲಿ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ, ಸಾರ್ವಜನಿಕರ ಭಕ್ತಿಗೂ ಧಕ್ಕೆಯಾಗದ ರೀತಿಯಲ್ಲಿ ಆಚರಣೆ ಮಾಡಲು ಮುಂದಾಗಿದೆ.
ರಥ ಬೀದಿಯ ಆಂಜನೇಯ ದೇವಸ್ಥಾನದ ಹನುಮ ಉತ್ಸವ ಮೂರ್ತಿಯ ಮಂಟಪದೊಂದಿಗೆ
ಹೆಚ್ ಆರ್ ಪಿ ಕಾಲೊನಿ, ಗೋಪಾಲ್ ಸರ್ಕಲ್, ಗುಡ್ಡೆಹೊಸೂರು, ಮಾದಪಟ್ಟಣ, ಕೂಡಿಗೆ, ಇಂದಿರಾ ಬಡಾವಣೆ, ಹಾರಂಗಿ ಚಿಕ್ಕತ್ತೂರೂ ಮತ್ತಿತ್ತರ ಮಂಟಪಗಳ ಜೊತೆಗೆ ಕೆಲವು ಹೊಸ ಸೇರ್ಪಡೆ ಬಗ್ಗೆಯೂ ಚರ್ಚಿಸಲಾಯಿತ್ತು.
ಈ ವರ್ಷ ಕಾರು ನಿಲ್ದಾಣದಲ್ಲಿ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.
ಕಳೆದ ವರ್ಷದ 17 ಸಾವಿರಕ್ಕೂ ಹೆಚ್ಚು ಉಳಿತಾಯ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಡಿ.ವಿ.ಗಿರೀಶ್ ಮಂಡಿಸಿದರು.
ಉಪಾಧ್ಯಕ್ಷರಾದ ಹೆಚ್.ಟಿ.ವಸಂತ್, ಟಿ.ವಿ.ಕಿಶೋರ್, ಎನ್.ಇ.ಬಾಲಕೃಷ್ಣ, ಕಾರ್ಯದರ್ಶಿ ಪಿ.ಆರ್.ರಾಮನಾಥನ್, ಸಹಕಾರ್ಯದರ್ಶಿ ಸುನೀಲ್ ಕುಮಾರ್, ನಿರ್ದೇಶಕರುಗಳಾದ ಕೆ.ಎಸ್.ನಾಗೇಶ್, ಕೆ.ಎನ್.ದೇವರಾಜ್, ಕೆ.ಜಿ.ಮನು, ವಿಮಲ್, ವಸಂತ್ ರೈ, ಚಂದ್ರಶೇಖರ್ ಹೇರೂರು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!