ಕುಶಾಲನಗರದ ಶ್ರೀ ಮಹಾಗಣಪತಿ ವಾರ್ಷಿಕ ರಥೋತ್ಸವ ನವೆಂಬರ್ 27 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು
ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.
ಸಮಿತಿ ಕಛೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವ ಅಂಗವಾಗಿ ನ.24 ರಿಂದ ಡಿ.03 ರ ವರೆಗೆ ದೇವಸ್ಥಾನದಲ್ಲಿ ಪ್ರತಿದಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ರಥೋತ್ಸವ ದಿನದಂದು ಬರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ನ.26 ರಿಂದ ಡಿ 20 ರ ತನಕ ಗುಂಡುರಾವ್ ಬಡಾವಣೆಯಲ್ಲಿ ಜಾತ್ರೆ ನಡೆಯಲಿದೆ.
ನ.27 ರಿಂದ ಡಿ.03 ರವರೆಗೆ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ.05, 06 ರಂದು ಗೋಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯಕ್ರಮ ನಡೆಯಲಿದೆ. ಡಿ.07 ದು ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗಣಪತಿ
ದೇವಾಲಯದ ಪ್ರಧಾನ ಅರ್ಚಕರಾದ ಆರ್.ಕೆ.ನಾಗೇಂದ್ರ ಬಾಬು ಅವರು ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿ ದಿನ ನಡೆಯುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕುಶಾಲನಗರ ಗಣಪತಿ ರಥೋತ್ಸವ ನಂತರ ಸಮೀಪದ ಕೂಡಿಗೆ, ಕಣಿವೆ ಇತರೆ ಗ್ರಾಮಗಳಲ್ಲಿ ವಿವಿಧ ರಥೋತ್ಸವಗಳು ಜರುಗಲಿರುವುದು ಕುಶಾಲನಗರ ರಥೋತ್ಸವದ ವಿಶೇಷತೆ ಎಂದರು.
ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕ ಹೆಚ್.ಎಂ.ಚಂದ್ರು, ವಿಶೇಷ ಆಹ್ವಾನಿತ ಕೆ.ಸಿ.ನಂಜುಂಡಸ್ವಾಮಿ ಇದ್ದರು.