ಪ್ರಕಟಣೆ

ಇಂದಿನಿಂದ 7 ದಿನಗಳ ಕಾಲ ಕರಕುಶಲ‌ ಮತ್ತು ನೇಯ್ಗೆ ಮಹೋತ್ಸವ

ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-2023

ಕುಶಾಲನಗರ, ಅ 26:ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರಕಾರದ ಜವಳಿ ಮಂತ್ರಾಲಯ, ಅಭಿವೃದ್ಧಿ ಆಯುಕ್ತರು (ಕರಕುಶಲ) ಇಲಾಖೆಯ ಅಡಿಯಲ್ಲಿ ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-2023 ಆಯೋಜನೆ ಮಾಡಲಾಗಿದೆ. ಈ ಮೇಳದ ಮುಖ್ಯ ಉದ್ದೇಶ ಕರಕುಶಲಕರ್ಮಿಗಳಿಗೆ ಒಂದೇ ಸೂರಿನಡಿಯಲ್ಲಿ ತಾವು ತಯಾರು ಮಾಡಿದ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಉದ್ದೇಶದಡಿಯಲ್ಲಿ ಭಾರತ ಸರಕಾರದ ಜವಳಿ ಮಂತ್ರಾಲಯ ಅಭಿವೃದ್ಧಿ ಆಯುಕ್ತರು ಕರಕುಶಲ ಸೇವಾಕೇಂದ್ರ ಮೈಸೂರು ಇವರ ಮುಖೇನ ಈ ಮೇಳವನ್ನು ಆಯೋಜನೆ ಮಾಡಲಾಗಿದೆ .

ಈ ಮೇಳದಲ್ಲಿ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧ ರಾಜ್ಯಗಳ ಸುಮಾರು 30ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಮತ್ತು ಕೈಮಗ್ಗ ನೇಕಾರರು ಭಾಗವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ಮೈಸೂರಿನ ಮರದ ಕೆತ್ತನೆಯ ವಸ್ತುಗಳು, ಚೆನ್ನಪಟ್ಟಣದ ಗೊಂಬೆಗಳು, ಮಂಡ್ಯದ ಮಣ್ಣಿನ ಮಡಿಕೆಗಳು, ಬೆಂಗಳೂರಿನ ಖಾದಿ ಶರ್ಟ್ ಗಳು ಮತ್ತು ಖಾದಿ ಉತ್ಪನ್ನಗಳು, ನಮ್ಮ ರಾಜ್ಯದ ಕೈಮಗ್ಗ ಉತ್ಪನ್ನಗಳು ಇದರ ಜೊತೆಗೆ ಸಿಕ್ಕಿಂ ರಾಜ್ಯದ ಮರದ ಗೃಹಲಂಕಾರಿಕ ವಸ್ತುಗಳು ಮತ್ತು ಕೈಮಗ್ಗ ವಸ್ತುಗಳು, ಆಂಧ್ರಪ್ರದೇಶ ರಾಜ್ಯದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು, ಪಶ್ಚಿಮ ಬಂಗಾಳದ ಕಾಂತ ಸೀರೆಗಳು, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದ ತಸ್ಸರ್ ರೇಷ್ಮೆ ಸೀರೆಗಳು, ತಮಿಳುನಾಡು ರಾಜ್ಯದ ಪರಿಶುದ್ಧ ರೇಷ್ಮೆ ಸೀರೆಗಳು ಇನ್ನೂ ಹಲವು ಕರಕುಶಲ ಮತ್ತು ಕೈಮಗ್ಗ ವಸ್ತುಗಳು ಈ ವಿಶೇಷ ಮೇಳದಲ್ಲಿ ಕುಶಾಲನಗರದ ಜನತೆಗೆ ದೊರಕಲಿದೆ ಈ ಮೇಳವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಅವರು ಉದ್ಘಾಟನೆಯನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಡಿವೈಎಸ್ಪಿ ಗಂಗಾಧರಪ್ಪ,‌ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಮೈಸೂರು ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನಿಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

ಈ ಮೇಳಕ್ಕೆ ಉಚಿತ ಪ್ರವೇಶವನ್ನು ಕಲ್ಪಿಸಿಕೊಡಲಾಗಿದೆ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!