ಸುದ್ದಿಗೋಷ್ಠಿ

ಕುಶಾಲನಗರ ಗೌಡ ಮಹಿಳಾ ಒಕ್ಕೂಟ ಅಸ್ತಿತ್ವಕ್ಕೆ: ಸದಸ್ಯರಾಗಲು ಕರೆ

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷರಿಂದ ಮಾಹಿತಿ

ಕುಶಾಲನಗರ, ನ 24: ಕುಶಾಲನಗರ ಗೌಡ‌ ಮಹಿಳಾ ಒಕ್ಕೂಟ ರಚಿಸಲಾಗಿದ್ದು ಗೌಡ ಸಮುದಾಯದ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವಂತೆ ಒಕ್ಕೂಟದ ಅಧ್ಯಕ್ಷೆ ಕುಯ್ಯಮುಡಿ ಶ್ರೀವಾಣಿ ಸುರೇಶ್ ಕರೆ ನೀಡಿದರು.
ಕುಶಾಲನಗರ ಗೌಡ ಸಮಾಜದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡ ಜನಾಂಗದ ಆಚಾರ, ವಿಚಾರ, ಪದ್ದತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಮತ್ತು ಸಮುದಾಯದ ಹಬ್ಬ, ಹರಿದಿನ ಆಚರಣೆಗಳನ್ನು ಸದಾ ಸಕ್ರಿಯವಾಗಿಡುವ ನಿಟ್ಟಿನಲ್ಲಿ ಮಹಿಳಾ ಒಕ್ಕೂಟ ರಚಿಸಲಾಗಿದೆ. ಸಮುದಾಯದ ಮಹಿಳೆಯರು ವಯಸ್ಸಿನ ಬೇಧವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕೂಟದ ಸದಸ್ಯರಾಗುವ ಮೂಲಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಒಕ್ಕೂಟದ
ಅಧ್ಯಕ್ಷರಾಗಿ ಕುಯ್ಯಮುಡಿ ಶ್ರೀವಾಣಿ ಸುರೇಶ್, ಕಾರ್ಯದರ್ಶಿಯಾಗಿ ಕುದುಪಜೆ ಜ್ಯೋತಿ ಲವಕುಮಾರ್, ಉಪಾಧ್ಯಕ್ಷರಾಗಿ ಕುದುಪಜೆ ಲತಾ ಸುರೇಶ್, ಸಹ ಕಾರ್ಯದರ್ಶಿಯಾಗಿ ಕಲಾ ಆನಂದ ಕರಂದ್ಲಾಜೆ, ಖಜಾಂಜಿಗಳಾಗಿ ಊರೊಳನ ಉಷಾ ಸುರೇಶ್ ಆಯ್ಕೆಯಾಗಿದ್ದು, ಒಕ್ಕೂಟದಲ್ಲಿ 15 ಮಂದಿ ಪದಾಧಿಕಾರಿಗಳು ಹಾಗೂ 350 ಮಹಿಳಾ ಸದಸ್ಯರ ಸೇರ್ಪಡೆಯಾಗಿದ್ದು ,ಇನ್ನಷ್ಟು ಸದಸ್ಯರ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ. 10 ಕುಟುಂಬ 18 ಗೋತ್ರದ ಎಲ್ಲಾ ಗೌಡರು ಈ ಮಹಿಳಾ ಒಕ್ಕೂಟದ ಸದಸ್ಯರಾಗಬಹುದು ಎಂದು ಅವರು ತಿಳಿಸಿದ್ದಾರೆ.

ಒಕ್ಕೂಟದ ಕಾರ್ಯದರ್ಶಿ ಕುದುಪಜೆ ಜ್ಯೋತಿ ಲವಕುಮಾರ್ ಮಾತನಾಡಿ, ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಈಗಾಗಲೆ‌ ಒಕ್ಕೂಟ ಸಕ್ರಿಯವಾಗಿದೆ. ಕುಶಾಲನಗರದಲ್ಲಿ ಈ ಹಿಂದೆ ಇದ್ದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟವನ್ನು ನೂತನ ಒಕ್ಕೂಟವಾಗಿ ರಚನೆ ಮಾಡಿ ನೊಂದಣಿ‌ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಕುಶಾಲನಗರ ಗೌಡ ಸಮಾಜ ಮತ್ತು ಕೊಡಗು ಗೌಡ ಸಮಾಜಗಳ ಒಕ್ಕೂಟದ ಬಲವರ್ಧನೆಗೆ ಈ ಒಕ್ಕೂಟ ಕೆಲಸ ಮಾಡಲಿದೆ. ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.

ನೂತನ ಆಡಳಿತ ಮಂಡಳಿಯಲ್ಲಿ
ಉಷಾ ಊರೊಳನ , ಹರಿಣಿ ಮುಕ್ಕಾಟಿ, ಲತಾ ಜಬ್ಬನ, ಭವಾನಿ ನೈಯಣಿ, ಅಶ್ವಿನಿ ಕೂರನ, ನವೀನ ಮುಕ್ಕಾಟಿ, ಅನಿತಾ ನಂಗಾರು, ಲತಾ ಕುದುಪಜೆ ,ರೂಪ ಹಾನಗಲ್,ರಶಿ ಚೆರಿಯಮನೆ ,ಶುಭ ಹೊಸಮನೆ, ಶೈಲಾ ಕೇಡನ ಇದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!