ಕುಶಾಲನಗರ, ನ 24 : ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ಪ್ರಾಂಶುಪಾಲೆ ಜೆ.ಎ.ಸಂಜನಾ ಅವರಿಗೆ ಪ್ರಸಕ್ತ ಸಾಲಿನ 2026 27 ನೇ ಸಾಲಿನ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿ ದೊರೆತಿದೆ.
ಬೆಂಗಳೂರಿನ ಇಂಡಿಯನ್ ಟ್ಯಾಲೆಂಟ್ ಓಲೆಂಪಿಯಾಡ್ ಸಂಸ್ಥೆಯ ವತಿಯಿಂದ ನಡೆಸಿದ ಎಕ್ಸಲೆನ್ಸ್ ಅವಾರ್ಡ್ ಕುರಿತಾದ ಸ್ಪರ್ಧೆಯಲ್ಲಿ ಸಂಜನಾ ಅವರು ಭಾಗಿಯಾಗಿದ್ದರು.
ಇಂಡಿಯನ್ ಟ್ಯಾಲೆಂಟ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಪಿ.ಬಿ.ಕೊಟ್ಟೂರ್, ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಸಂಜನಾ ಅವರಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಿದರು.
ಪ್ರಾಂಶುಪಾಲೆ ಸಂಜನಾ ಅವರಲ್ಲಿನ ನಾಯಕತ್ವದ ಗುಣಗಳು, ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳ ಮೇಲಿನ ಬದ್ಧತೆ ಹಾಗೂ ಪ್ರಸಕ್ತ ಸಾಲಿನಲ್ಲಿ ತಮ್ಮ ಸಂಸ್ಥೆಯಲ್ಲಿನ ತರಗತಿಯ ಕೋಣೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಕುತೂಹಲ ಹಾಗೂ ಶೈಕ್ಷಣಿಕ ಉತ್ಕ್ರುಷ್ಟತೆಗೆ ನೀಡಿದ ಸೇವೆಗಳನ್ನು ಗುರುತಿಸಿ ಎಕ್ಸಲೆನ್ಸ್ ಅವಾರ್ಡ್ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಟಿ.ಕೆ.ಸುಧೀರ್ ಹಾಗೂ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಶ್ಲಾಘಿಸಿದ್ದಾರೆ.
Back to top button
error: Content is protected !!