ಪ್ರಕಟಣೆ

ಉತ್ತಮ ಶ್ರೇಣಿ‌ ಕಾರ್ಯ ನಿರ್ವಹಣೆ: ಕೂಡುಮಂಗಳೂರು ಸಹಕಾರ ಸಂಘಕ್ಕೆ ವಾರ್ಷಿಕ‌ ಪ್ರಶಸ್ತಿ

ಕುಶಾಲನಗರ, ಸೆ 20: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ‌ಪತ್ತಿನ ಸಹಕಾರ ಸಂಘ ಭಾಜನವಾಗಿದೆ.

ಉತ್ತಮ ಶ್ರೇಣಿಯ ಕಾರ್ಯನಿರ್ವಹಣೆಗಾಗಿ ಪ್ರಥಮ ಸ್ಥಾನ ಪಡೆದ ಸಂಘಕ್ಕೆ ಮಡಿಕೇರಿ ಕಾವೇರಿ ಹಾಲ್ ನಲ್ಲಿ‌ ನಡೆದ ಕೆಡಿಸಿಸಿ ಮಹಾಸಭೆಯಲ್ಲಿ ಪ್ರಶಸ್ತಿ ಪತ್ರವನ್ನು ಸಂಘದ ಅಧ್ಯಕ್ಷರಾದ ಕೆ.ಕೆ.ಹೇಮಂತ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಮಾನದಂಡದ ಅಧಾರದ ಮೇಲೆ ಸಹಕಾರ ಸಂಘಗಳ ನಿಯಮಾವಳಿ ಅನುಗುಣವಾಗಿ ಹೂಡಿಕೆಯ ಬಂಡವಾಳ, ಸಂಘದ ಸದಸ್ಯತ್ವ ಹೆಚ್ಚಳಿಕೆ, ಎರಡು ವರ್ಷಗಳ ವ್ಯವಹಾರಗಳ ಆದಾಯ, ಸಂಘದ ಶ್ರೇಣಿಯ ಅಂಶ, ಸದಸ್ಯರ ಠೇವಣಿಯ ಸಂಗ್ರಹದ ಮಟ್ಟ, ಸುಸ್ಧಿ ಸಾಲ ವಸೂಲಾತಿ, ಲಾಭ ನಷ್ಟ ಪರಿಗಣನೆ ಸೇರಿದಂತೆ ವಾರ್ಷಿಕ ವ್ಯವಹಾರ ಲಾಭಾಂಶಗಳ ಅಂಶಗಳನ್ನು ಅಧಾರಿತವಾಗಿ ಈ ಸಾಲಿನಲ್ಲಿ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘಕ್ಕೆ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!