ಪ್ರಕಟಣೆ
ಸೆ 23 ಕ್ಕೆ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಸೆ 20:ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 9.64 ಲಕ್ಷ ರೂಗಳ ಲಾಭಗಳಿಸಿದ್ದು ಎ ತರಗತಿಯಲ್ಲಿ ವರ್ಗೀಕರಣವಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ ಕೆ ದಿನೇಶ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು 8 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಘ 900 ಸದಸ್ಯರನ್ನು ಹೊಂದಿದೆ. ರೂ ಎರಡು ಕೋಟಿ 44 ಲಕ್ಷ ದುಡಿಯುವ ಬಂಡವಾಳ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸಂಘವು ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ ಹಾಗೂ ಪಿಗ್ಮಿ ಸಾಲಗಳನ್ನು ನೀಡುತ್ತಿದೆ. ಸದಸ್ಯರ ಸಹಕಾರ ಮೂಲಕ ಸಂಘ ಅಭಿವೃದ್ಧಿ ಸಾಧಿಸಿದೆ ಎಂದು ಅವರು ಹೇಳಿದರು.
ಸಂಘದ ಸದಸ್ಯರಾದ ಎಂ ಡಿ ನಾಗರಾಜು ಅವರು ಸಂಘಕ್ಕೆ ಉಚಿತವಾಗಿ ನಿವೇಶನ ನೀಡಿದ್ದು ಈ ಸಾಲಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ, ಕಟ್ಟಡ ನಿಧಿ ಮೂಲಕ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಸದ್ಯದಲ್ಲಿ ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದರು. ಈ ತಿಂಗಳ 23ರಂದು ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಕಟ್ಟಡದಲ್ಲಿ 8ನೇ ವಾರ್ಷಿಕ ಮಹಾ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜಿ ಬಿ ಜಗದೀಶ್ ನಿರ್ದೇಶಕರಾದ ಸಿ ವಿ ನಾಗೇಶ್ ಎಂ ಡಿ ರವಿಕುಮಾರ್ ಇದ್ದರು.