ಕಾರ್ಯಕ್ರಮ

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ವತಿಯಿಂದ ಶ್ರಮದಾನ

ಕುಶಾಲನಗರ ಸೆ.11: ಮಡಿಕೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ( ಎನ್.ಎಸ್.ಎಸ್.) ಘಡಕದ ವತಿಯಿಂದ ಹಮ್ಮಿಕೊಂಡಿರುವ ಒಂದು ವಾರ ಕಾಲದ ವಾರ್ಷಿಕ ವಿಶೇಷ ಶಿಬಿರದಲ್ಲಿ
ಸೋಮವಾರ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಮಾದರಿ
ಪ್ರಾಥಮಿಕ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.
ಕಾಲೇಜು ಆವರಣದಂಚಿನಲ್ಲಿರುವ ಚರಂಡಿಯನ್ನು ಸ್ವಚ್ಚಗೊಳಿಸುವ ಮೂಲಕ ಅಲ್ಲಲ್ಲಿ ಬಿಸಾಕಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಹೆರಕಿ ತೆಗೆಯುವ ಮೂಲಕ ಆವರಣವನ್ನು ಸ್ವಚ್ಛಗೊಳಿಸಿದರು.
“ಸ್ವಚ್ಛತೆಯೇ ಸೇವೆ – ನಮ್ಮ ನಡಿಗೆ ಸ್ವಚ್ಛತೆಯೆಡೆಗೆ” ಎಂಬ ಧ್ಯೇಯದೊಂದಿಗೆ
ಕಾಲೇಜು ಆವರಣದಲ್ಲಿರುವ ಶೌಚಾಲಯನ್ನು ಸ್ವಚ್ಛಗೊಳಿಸಿದ ಎನ್.ಎಸ್.ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳು ಮಹಾತ್ಮಗಾಂಧೀಜಿಯವರು ಸ್ವಚ್ಚತೆಗೆ ನೀಡುತ್ತಿದ್ದ ಸೇವೆಯ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸಿದರು.
ಎನ್ನೆಸ್ಸೆಸ್ ವಿದ್ಯಾರ್ಥಿಗಳೊಂದಿಗೆ ಜತೆಗೂಡಿ ಸ್ವತಃ ಗುದ್ದಲಿ ಹಿಡಿದು
ಶ್ರಮದಾನ ಕಾರ್ಯದಲ್ಲಿ ತೊಡಗಿದ್ದ
ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟೇಶ್ ಪ್ರಸನ್ನ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಯುವ ಜನಾಂಗದಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವುದರ ಜೊತೆಗೆ ಸಹ ಬಾಳ್ವೆ, ಸಂಘಟನೆ, ಶ್ರಮದಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ
ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದು ತಿಳಿಸಿದರು.
ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ’.
ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಮಾನತೆ, ಭಾವೈಕ್ಯತೆ ಬೆಳೆಸುತ್ತದೆ. ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನೂ ಕಲಿಸಿಕೊಡುತ್ತದೆ ಎಂದು ತಿಳಿಸಿದರು.
ಎನ್ನೆಸ್ಸೆಸ್ ಶ್ರಮದಾನದ ಮಹತ್ವ ಕುರಿತು ಮಾತನಾಡಿದ
ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಡಾ ಎಂ.ಎ.ಪ್ರಕಾಶ್,
ಧ್ಯೇಯವಾಕ್ಯವು ನನಗಲ್ಲ, ನಿನಗೆ – ಎಂದು ಆಗಿದ್ದು, ಶ್ರಮದಾನದ ಮಹತ್ವವನ್ನು ತಿಳಿಸುತ್ತದೆ. ಜತೆಗೆ ಇದು ವಿದ್ಯಾರ್ಥಿಗಳಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಮಾಜ ಸೇವಾ ಮನೋಭಾವ ಅತ್ಯಗತ್ಯವಿದ್ದು, ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದೆ ಎಂದರು.
ಶ್ರಮದಾನ ಕಾರ್ಯದಲ್ಲಿ ಶಿಬಿರದ
ಸಹ ಶಿಬಿರಾಧಿಕಾರಿಗಳಾದ ಸಹಾಯಕ ಪ್ರಾಧ್ಯಾಪಕಿ ವಸಂತಕುಮಾರಿ, ಎವೆರೆಸ್ಟ್ ರೊಡ್ರಿಗಾಸ್,
ಡಾ ಕೆ.ಡಿ.ನಿರ್ಮಲ, ಡಾ ಚೈತ್ರ , ಶಿಬಿರಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!