ಕೂಡಿಗೆ ಸೆ , 9. ಇಲ್ಲಿಗೆ ಸಮೀಪದ ತೊರೆನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್, ಟಿ ಕುಶಾಲಪ್ಪ ನವರ ಅಧ್ಯಕ್ಷತೆಯಲ್ಲಿ ನಡೆಯಿತು
ಸಭೆಯಲ್ಲಿ ಈಗಾಗಲೇ ನಿರ್ಮಾಣಗೊಳಿಸಲಾಗಿರುವ ರೈತ ಸಮುದಾಯದ ಭವನದ ಅಭಿವೃದ್ಧಿಕ್ಕೆ ಪೂರಕವಾದ ಅನೇಕ ಚರ್ಚೆಗಳು ನಡೆದವು ಸಂಘದ ವ್ಯಾಪ್ತಿಯ ಸದಸ್ಯರು ತಮ್ಮ,ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಅಲ್ಲದೆ2022-23 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮೇಲೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು, ಸಾಲ ಸೌಲಭ್ಯಗಳು ಸೇರಿದಂತೆ ಸಂಘದ ಸದಸ್ಯರು ಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ರೈತರಿಗೆ ಅನುಕೂಲವಾಗುವಂತೆ ವಿವಿಧ ಹೊಸ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸವಿಸ್ತಾರವಾದ ಚರ್ಚೆಗಳು ನಡೆದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹೆಚ್, ಟಿ ಕುಶಾಲಪ್ಪ ಮಾತನಾಡುತ್ತಾ 2022-23 ಸಾಲಿನಲ್ಲಿ ರೈತರಿಗೆ ಅನುಕೂಲವಾಗುವಂತೆ ವಿವಿಧ ವ್ಯವಹಾರಗಳನ್ನು ಲೋಕ ಇದರಲ್ಲಿ ವಿವಿಧ ಬಗೆಯ ಸಾಲವನ್ನು ಸದಸ್ಯರಿಗೆ ವಿತರಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ಸಾಲ ವಸೂಲಾತಿಯನ್ನು ಮರು ಪಾವತಿಸಿಕೊಳ್ಳುವುದರ ಮೂಲಕ ಸಂಘವು ಈ ಸಾಲಿನಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರ್ಗೀಕರಣ ಮಾನದಂಡದಂತೆ ಸಂಘವು ,ಎ” ತರಗತಿಯಲ್ಲಿ ಸಾಗುತ್ತಿದೆ ಎಂದರು. ವಾರ್ಷಿಕ ವ್ಯವಹಾರಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ 11, ಲಕ್ಷ, 65, ಸಾವಿರ ರೂಗಳಷ್ಡು ಲಾಭವನ್ನು ಗಳಿಸಿದೆ, ಮುಂದಿನ ಸಾಲಿನಲ್ಲಿ ರೈತರಿಗೆ ಅನುಕೂಲವಾಗುವಂತೆ ರೈತ ಸಮುದಾಯದ ಭವನದ ಅಭಿವೃದ್ಧಿಗೆ ಹೆಚ್ಚು ಹಣವನ್ನು ಕಾಯ್ದಿರಿಸಿಕೊಂಡು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘದ ವ್ಯಾಪ್ತಿಯ ರೈತ ಸದಸ್ಯರ ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು.
ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ, ಪ್ರೀತು ಮಂಡಿಸಿದರು.
ಈ ಸಂದರ್ಭ ಸಭೆಯಲ್ಲಿ ಉಪಾಧ್ಯಕ್ಷೆ ಟಿ, ಎಂ,ಲಲಿತ, ನಿರ್ದೇಶಕ, ಹೆಚ್, ಬಿ, ಚಂದ್ರಪ್ಪ, ಟಿ, ಕೆ, ಪಾಂಡುರಂಗ, ಟಿ ಕೆ ಕುಮಾರ್, ಟಿ, ಸಿ, ಶಿವಕುಮಾರ್ , ಟಿ, ಪಿ, ಪ್ರಸನ್ನ, ಡಿ, ಆರ್ ಪ್ರೇಮ ಕುಮಾರ್, ಕೆ, ಎಸ್,ಕೃಷ್ಣೆಗೌಡ , ಹೆಚ್, ಆರ್, ಭಾಗ್ಯ, ಟಿ, ಜಿ ಲೋಕೇಶ್, ಟಿ, ಜಿ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ, ಪ್ರೀತು, , ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ. ಹೆಬ್ಬಾಲೆ ವೃತ್ತ ಮೇಲ್ವಿಚಾರಕ ಟಿ, ಎಸ್ ತಂಗರಾಜ್ , ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸಭೆಯ ನಿರೂಪಣೆಯನ್ನು ಚಂದ್ರಪ್ಪ ನೆರವೇರಿಸಿ, ಲೋಕೇಶ್ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು.
Back to top button
error: Content is protected !!