ಕಾರ್ಯಕ್ರಮ

ವಿಶ್ವ ಶ್ವಾನ ದಿನಾಚರಣೆ: ಶ್ವಾನಗಳ ಫಿಟ್‌ನೆಸ್, ಶುಚಿತ್ವ ಹಾಗೂ ಮಾಲಿಕನ ನಿಯಂತ್ರಣ ಸ್ಪರ್ಧೆ

ಹುಣಸೂರು ಆ 26: ಹುಣಸೂರು ರೋಟರಿ ಸಂಸ್ಥೆಯು ವಿಶ್ವ ಶ್ವಾನ ದಿನದ ಅಂಗವಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ೧೪ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳ ಆಕರ್ಷಕ ಪ್ರದರ್ಶನವು ಶ್ವಾನಪ್ರಿಯರನ್ನು ಆಕರ್ಷಿಸಿತು.
ಶನಿವಾರ ನಗರಸಭಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದು, ಗ್ರೇಡ್ ಡೆನ್, ರಾಟ್ ವೀಲ್, ಲ್ಯಾಬರ್ಡೋಲ್, ಜರ್ಮನ್ ಶಫರ್ಡ್, ಪಿಟ್ ಬುಲ್, ಗೋಲ್ಡನ್ ರೇಟ್ರಿವರ್, ಪಾಮೋರಿಯನ್, ಸಿಟ್ಜ್ ಹಾಗೂ ಪಗ್ ಸೇರಿದಂತೆ ೧೪ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳು ಭಾಗವಹಿಸಿದ್ದವು.
ಸ್ಪರ್ಧೆಯ ಅಂತಿಮ ಹಂvದ ಸ್ಪರ್ಧೆಗೆ ೧೪ಶ್ವಾನಗಳು ಆಯ್ಕೆಯಾಗಿದ್ದವು. ಮೂರು ರೌಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ವಾನಗಳ ಫಿಟ್‌ನೆಸ್, ಶುಚಿತ್ವ ಹಾಗೂ ಮಾಲಿಕನ ನಿಯಂತ್ರಣ(ಪಾಠ)ವನ್ನು ತೀರ್ಪುಗಾರರು ಪರೀಕ್ಷಿಸಿ ಬಹುಮಾನ ಘೋಷಿಸಿದರು.
ಪಶುಇಲಾಖೆ ಸಹಾಯಕ ನಿರ್ದೇಶಕÀ ಚನ್ನಬಸಪ್ಪ, ಶ್ವಾನ ಪ್ರೇಮಿಗಳಾದ ಬೈಲಕುಪ್ಪೆಯ ಡೋಲ್ಮ ಡಾಗ್ ರೆಸ್ಕ್ಯೂಸೆಂಟರ್‌ನ ಕಾಲ್ಸಂಗ್ ದೋರ್ಜಿ ಹಾಗೂ ಹುಣಸೂರು ನಗರದ ಸರಸ್ವತಿಪುರಂನ ಬಸವರಾಜ್ ತೀರ್ಪುಗಾರರಾಗಿದ್ದರು. ಭಾಗವಹಿಸಿದ ಎಲ್ಲಾ ಶ್ವಾನಗಳಿಗೂ ನಗರದ ಪ್ರೀತಿ ವೆಟ್ ಮೆಡಿಕಲ್‌ವತಿಯಿಂದ ಪ್ರಶಸ್ತಿ ಪತ್ರ ಹಾಗೂ ವಿಜೇತ ಶ್ವಾನಗಳಿಗೆ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಚನ್ನಕೇಶವ ನಾಯಿಗಳು ನಮ್ಮಂತೆ ಬದಕಲು ಹಕ್ಕಿದೆ. ಉಪಕಾರಿಯಾಗಿರುವ ಶ್ವಾನಗಳು ಮಾನವನಿಗೆೆ ಪರೋಪಕಾರಿಯಾಗಿದ್ದು, ಅವುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ರೋಟರಿ ಕ್ಲಬ್‌ವತಿಯಿಂದ ಶ್ವಾನಗಳ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಈ ವೇಳೆ ರೋಟರಿ ಕಾರ್ಯದರ್ಶಿ ಕೆ.ಪಿ.ಪ್ರಸನ್ನ, ಸದಸ್ಯರಾದ ರಾಜಶೇಖರ್, ಆನಂದ್, ಗಿರೀಶ್, ಶಾಮ್, ಸತೀಶ್ ಸೇರಿದಂತೆ ಶ್ವಾನ ಪ್ರಿಯರು ಹಾಜರಿದ್ದರು.
ವಿಜೇತ ಶ್ವಾನಗಳಿವು;
ಸ್ಪರ್ಧೆಯಲ್ಲಿ ಹುಣಸೂರಿನ ಮಲ್ಲಿಕಾರ್ಜುನ್‌ರ ಲಿಯಾ ಎಂಬಾ ಗ್ರೇಡ್ ಡೆನ್ ತಳಿಯ ಶ್ವಾನ(ಪ್ರಥಮ), ಚಂದನ್‌ಗೌಡ ಮಾಲಿಕತ್ವದ ಕನ್ವರ್ ಹೆಸರಿನ ಜರ್ಮನ್ ಶಫರ್ಡ್ ತಳಿಯ ಶ್ವಾನ(ದ್ವಿತೀಯ) ಹಾಗೂ ರೋ.ರಾಜಶೇಖರ್ ಮಾಲಿಕತ್ವದ ಗ್ರೇ ಹೆಸರಿನ ಗ್ರೇಡ್ ಡೆನ್ ತಳಿಯ ಶ್ವಾನ(ತೃತೀಯ) ಸ್ಥಾನಪಡೆದವು. ಪ್ರಥಮ ೨,೫೦೦, ದ್ವಿತೀಯ ೧,೫೦೦ ಹಾಗೂ ೧೦೦೦ರೂ ನಗದು ಬಹುಮಾನ ಹಾಗೂ ಟ್ರೋಪಿ ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!