ಕುಶಾಲನಗರ, ಆ 17: ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಬಳಿ ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿ ಮಧ್ಯೆ ಏತ ನೀರಾವರಿ ಯೋಜನೆ ಮುಖಾಂತರ ರೈತರಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದು ರಸ್ತೆ ಸಂಪೂರ್ಣ ಜಲಮಯವಾಗಿತ್ತು. ಕಳೆದೊಂದು ವಾರದಿಂದ ರಸ್ತೆ ಸಂಪೂರ್ಣ ಜಲಮಯವಾಗಿದ್ದು, ದಿನನಿತ್ಯ ಓಡಾಡುವಂತ ನೂರಾರು ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ಅನಾನುಕೂಲ ಸೃಷ್ಠಿಸಿತ್ತು.
ಈ ಬಗ್ಗೆ ದೂರುಗಳ ಬಂದ ಹಿನ್ನಲೆಯಲ್ಲಿ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಭಿಯಂತರರ ಗಮನಕ್ಕೆ ತಂದು ಸಮಸ್ಯೆಯ ಕುರಿತು ಮನವರಿಕೆ ಮಾಡಿ ಕೂಡಲೇ ಸರಿಪಡಿಸಿ ಕೊಡುವಂತೆ ಸೂಚಿಸಿದರು. ಅದರಂತೆ ಏತ ನೀರಾವರಿ ಯೋಜನೆಯ ಪೈಪ್ ಲೈನ್ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು.
ತಡರಾತ್ರಿಯವರಿಗೂ ದುರಸ್ಥಿ ಕಾಮಗಾರಿ ನಡೆಯಿರು.
ದುರಸ್ಥಿ ಕಾಮಗಾರಿ ಮುಗಿಯುವ ತನಕ
ಕೂಡುಮಂಗಳೂರು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸ್ಥಳದಲ್ಲಿಯೇ ಇದ್ದು ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭ ಕೂಡುಮಂಗಳೂರು ಬಿಜೆಪಿ ಅಧ್ಯಕ್ಷ ಮಂಜುನಾಥ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸುರೇಶ್ ಮತ್ತು ಗುತ್ತಿಗೆದಾರರ ಅಸಿಸ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Back to top button
error: Content is protected !!