ಕುಶಾಲನಗರ, ಆ 18: ಕುಶಾಲನಗರದ ಪ್ರಜ್ಞಾ ಕಾವೇರಿ ವೇದಿಕೆ ಆಶ್ರಯದಲ್ಲಿ ಇತ್ತೀಚೆಗೆ ಮಣಿಪುರದಲ್ಲಿ ಘಟಿಸಿದ ಅಹಿತಕರ ಘಟನಾವಳಿ ಬಗ್ಗೆ ಸತ್ಯಾಸತ್ಯತೆ ತೆರೆದಿಡುವ ಕಾರ್ಯಗಾರ ಗಾಯತ್ರಿ ಸಭಾಂಗಣದಲ್ಲಿ ನಡೆಯಿತು.
ಮಣಿಪುರದ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ವಿಜೇತೆ ಡಾ.ಉರ್ಮಿಕ ಮಾಯ್ಬಮ ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದ್ದ ಮಣಿಪುರದ ಪ್ರಸ್ತುತ ಘಟನಾವಳಿಗಳು ಆತಂಕಕಾರಿ ವಿಚಾರ ಎಂದ ಅವರು, ಇತ್ತೀಚಿಗೆ ನಡೆದ ಅಹಿತಕರ ಬೆಳವಣಿಗೆಗಳು, ಅಲ್ಲಿನ ವರ್ಗೀಯ ಸಂಘರ್ಷಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ
ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನುಸುಳುಕೋರರ ನಡುವೆ ಮಣಿಪುರದ ಮೂಲ ನಿವಾಸಿಗಳು ನಲುಗಿ ಹೋಗಿದ್ದಾರೆ. ನಾಗಾಲಾಂಡ್, ಮಿಜೋರಾಂ, ಮೈಯನ್ಮಾರ್, ಅಸ್ಸಾಂ ನಡುವೆ ಸಿಲುಕಿದ ಮಣಿಪುರದ ಹಿಂದೂಗಳು ಭಯೋತ್ಪಾದನೆ, ಮತಾಂತರ, ಪ್ರತ್ಯೇಕತೆಯ ಕೂಗಿನ ನಡುವೆ ತಮ್ಮ ಅಸ್ತಿತ್ವಕ್ಕಾಗಿ ಸದಾ ಹೋರಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸುದೀರ್ಘ ಎರಡು ಸಾವಿರ ವರ್ಷಗಳ ರಾಜರ ಆಳ್ವಿಕೆಯ ಪರಂಪರೆ ಹೊಂದಿರುವ ಮಣಿಪುರದ ಹಿಂದೂಗಳು ನೂರಕ್ಕೆ ನೂರು ಪ್ರತಿಶತ ಸನಾತನಿಗಳು. ಶೇ.90 ರಷ್ಟಿದ್ದ ಮಣಿಪುರದ ಹಿಂದೂಗಳ ಸಂಖ್ಯೆ ಇಂದು ಶೇ. 50ಕ್ಕೆ ಇಳಿಮುಖಗೊಂಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನುಸುಳುಕೋರರನ್ನು ವೋಟ್ ಬ್ಯಾಂಕ್ ದೃಷ್ಠಿಯಿಂದ ಅಡ್ಡಿಮಾಡದೆ ಪೋಷಿಸಿದ ಬೆಳೆಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲಬೇಕು ಎಂದು ಅವರು ಆರೋಪಿಸಿದರು.
ಪ್ರಜ್ಞಾ ಕಾವೇರಿ ವೇದಿಕೆ ಸಂಸ್ಥಾಪಕ ಸಂಯೋಜಕ ಜಿ.ಟಿ.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಮಣಿಪುರದ ಪ್ರಥಮ ರಕ್ಷಾಮಂತ್ರಿ ಪದಕ ವಿಜೇತೆ ಮೇಜರದ ಮೋತಿಮಾಲಾ ಗ್ಯಾಂಗೋಮ್ ಇದ್ದರು.
Back to top button
error: Content is protected !!