ಕುಶಾಲನಗರ, ಜು 27:ತೊರೆನೂರು ಗ್ರಾಪಂ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಅಧ್ಯಕ್ಷರಾಗಿ ಜಿ.ಟಿ.ಶೋಭಾ, ಉಪಾಧ್ಯಕ್ಷರಾಗಿ ಎ.ಜಿ.ರೂಪಾ ಗೆಲುವು ಸಾಧಿಸಿದ್ದಾರೆ.
ಬಿಸಿಎಂ ಎ ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶೋಭಾ, ಕಾಂಗ್ರೆಸ್ ಬೆಂಬಲಿತ ಮಹದೇವ ಸ್ಪರ್ಧಿಸಿದ್ದರು.
10 ಮಂದಿಯ ಆಡಳಿತ ಮಂಡಳಿಯ ಪೈಕಿ ಶೋಭಾ ಅವರಿಗೆ 6 ಮತ, ಮಹದೇವ್ ಅವರಿಗೆ 4 ಮತಗಳು ಲಭಿಸಿದವು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಎ.ಜಿ.ರೂಪಾ, ಕಾಂಗ್ರೆಸ್ ನಿಂದ ಸಾವಿತ್ರಿ ಸ್ಪರ್ಧಿಸಿದ್ದರು. ಈ ಪೈಕಿ ರೂಪಾ ಅವರಿಗೆ 7, ಸಾವಿತ್ರಿ ಅವರಿಗೆ
3 ಮತಗಳು ಲಭಿಸಿವೆ.
ಚುನಾವಣಾಧಿಕಾರಿಯಾಗಿ ತಾಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಗ್ರಾಪಂ ಸದಸ್ಯರಾದ ಎಂ.ಟಿ.ಬೇಬಿ, ಕೆ.ಬಿ.ದೇವರಾಜ್, ನಿಂಗಾಜಮ್ಮ, ಶಿವಕುಮಾರ್, ತೀರ್ಥಾನಂದ, ಯಶೋಧ ಮತದಾನದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ನೂತನ ಅಧ್ಯಕ್ಷೆ, ಉಪಾಧ್ಯಕ್ಷರು, ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಎಚ್.ಬಿ.ಚಂದ್ರಪ್ಪ ಮಾತನಾಡಿ, ಗೆಲುವಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಕುಮಾರಪ್ಪ, ಎಚ್.ಬಿ.ಚಂದ್ರಪ್ಪ, ಮಹೇಶ್, ಪಾಂಡುರಂಗ, ರವಿಚಂದ್ರ, ಅಣ್ಣಯ್ಯ, ಟಿ.ಟಿ.ಸಂತೋಷ್, ಟಿ.ಕೆ.ವಿಶ್ವೇಶ್ವರಯ್ಯ, ವಿ.ಟಿ.ದೇವರಾಜ್, ಅರ್ಜುನ, ಥಾಮಸ್, ಎ.ಕೆ.ಸುಂದರ್, ಎ.ಕೆ.ದಿನೇಶ್, ಶಿವಪ್ಪ ಮತ್ತಿತರರು ಇದ್ದರು.
Back to top button
error: Content is protected !!