ಕುಶಾಲನಗರ, ಜು 25:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಉತ್ತಮ ವಾಹಿವಾಟು ನಡೆಸಿ ರೂ.2.06 ಕೋಟಿ ನಿವ್ವಳ ಲಾಭಗಳಿಸುವ ಮೂಲಕ ಕಳೆದ 19 ವರ್ಷಗಳಿಂದ ಸತತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು. ಬೈಪಾಸ್ ರಸ್ತೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ರೂ. 319.76 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು,ಅನುತ್ಪಾದಕ ಆಸ್ತಿಗಳಿಗೆ ರೂ 37.47 ಲಕ್ಷ, ಆದಾಯ ತೆರಿಗೆಗಳಿಗೆ ರೂ 19.59. ಲಕ್ಷ ಹಾಗೂ ಕಟ್ಟಡ ಮತ್ತು ಇತರ ಸವಕಳಿಗೆ ರೂ 12.43 ಲಕ್ಷಗಳನ್ನು ಕಾಯ್ದಿರಿಸಿ ರೂ 2.06 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ.
ಸಂಘವು ಕಳೆದ 2022-2023ನೇ ಸಾಲಿನಲ್ಲಿ 1305 ಸದಸ್ಯರಿಂದ ರೂ.3.45 ಕೋಟಿಗಳ ಪಾಲು ಬಂಡವಾಳ ಸಂಗ್ರಹಿಸಿದೆ.
ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಅಭ್ಯುದಯಕ್ಕಾಗಿ ಅವರುಗಳು ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಲು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ತಮ್ಮ ಕುಟುಂಬದ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯವಾಗುವ ರೀತಿಯಲ್ಲಿ ಮಹಿಳಾ ಚೇತನಾ ಸ್ವಸಹಾಯ ಗುಂಪು ಸಾಲ ಯೋಜನೆ ಪ್ರಾರಂಭಿಸಿ ಮಹಿಳೆಯರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. 2023 ರ ಮಾರ್ಚ್ ಅಂತ್ಯಕ್ಕೆ ಸಂಘದಿಂದ 263 ಗುಂಪುಗಳ 2455 ರಷ್ಟು ಮಹಿಳೆಯರಿಗೆ ಒಟ್ಟು 12.82 ಕೋಟಿಗಳಷ್ಟು ಸಾಲ ವಿತರಿಸಲಾಗಿದೆ ಎಂದರು.
ಸಂಘದ ‘ಎ’ ತರಗತಿ ಸದಸ್ಯರುಗಳು ತಮ್ಮ ಸ್ವಂತ ಕಟ್ಟಡದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತಿರುವವರಿಗೆ ಹಾಲಿ ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಪ್ರತಿಯೊಬ್ಬ ಸದಸ್ಯರಿಗೆ ವೈಯುಕ್ತಿಕ ಜಾಮೀನಿನ ಆಧಾರದ ಮೇಲೆ ವ್ಯಾಪಾರಾಭಿವೃದ್ಧಿ ಮಾಸಿಕ ಕಂತಿನ ಸಾಲ ರೂ.50 ಸಾವಿರದಿಂದ 2.10 ಕೋಟಿ ಗಳಷ್ಟು ಸಾಲವನ್ನು ನೀಡಲಾಗುತ್ತಿದೆ.
ಅದರಲ್ಲಿ ರೂ.2 ಕೋಟಿ ಭದ್ರತಾ ಸಾಲವಾಗಿದ್ದು,ರೂ.10 ಲಕ್ಷ ಅಭದ್ರತಾ ಸಾಲವಾಗಿರುತ್ತದೆ ಎಂದರು.
ಸಂಘದ ಮಹೋನ್ನತ ಕಾರ್ಯಕ್ರಮ ವನಸಿರಿ ಯೋಜನೆಗೆ ಈಗಾಗಲೆ ಚಾಲನೆ ನೀಡುವ ಮೂಲಕ ಹಸಿರೀಕರಣಕ್ಕೆ ಒತ್ತಯ ನೀಡಲಾಗಿದೆ.
ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲವನ್ನು ಪ್ರಾರಂಭಿಸಿದ್ದು, ದೇಶದ ಒಳಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.20 ಲಕ್ಷಗಳಂತೆ, ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.50 ಲಕ್ಷಗಳವರೆಗೆ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತಿದೆ.
2022-2023ನೇ ಸಾಲಿನಲ್ಲಿ ಲಾಭ ವಿಲೇವಾರಿಯಲ್ಲಿ ಸದಸ್ಯರಿಗೆ ಶೇ.22 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಿರುತ್ತೇವೆ ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮನವಿ ಮಾಡಿತು.
ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.30 ರಂದು ಭಾನುವಾರ ಪೂರ್ವಾಹ್ನ 11.00 ಗಂಟೆಗೆ ಗಾಯಿತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಸದಸ್ಯ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷ ಶರವಣಕುಮಾರ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹೀರ್, ನಿರ್ದೇಶಕರಾದ ಎನ್.ಇ. ಶಿವಪ್ರಕಾಶ್ , ಕೆ.ಎಸ್.ಮಹೇಶ್, ಎಂ.ವಿ.ನಾರಾಯಣ್ , ಕೆ.ಪಿ.ಶರತ್ ವಿ.ಸಿ.ಅಮೃತ್ ,ರೇಖಾ ಟಿ.ಆರ್. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಜೇಸ್ ಬಿ.ಡಿ, ಸಂಘದ ವ್ಯವಸ್ಥಾಪಕ ರಾಜ ಆರ್ ಇದ್ದರು.
Back to top button
error: Content is protected !!