ಕುಶಾಲನಗರ,ಜು 19: ಕುಶಾಲನಗರ ಲಯನ್ಸ್ 317 ಡಿ ಹಾಗೂ ಕೆಎಂಟಿ ರಿನಾಲ್ ಕೇರ್ ಸೊಲ್ಯೂಷನ್ ಸಹಭಾಗಿತ್ವದೊಂದಿಗೆ ಕುಶಾಲನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆಗೊಳಿಸಲಾಯಿತು.
ಲಯನ್ಸ್ ಮಾಜಿ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಅವರು ಡಯಾಲಿಸಿಸ್ ಸೆಂಟರ್ ಉದ್ಘಾಟಿಸಿದರು. ಲಯನ್ಸ್ ಟ್ರಸ್ಟ್ ಮೂಲಕ ಲಯನ್ಸ್ ಜಿಲ್ಲೆಗೆ 11 ಯಂತ್ರಗಳನ್ನು ಈಗಾಗಲೆ ನೀಡಲಾಗಿದೆ. ಡಯಾಲಿಸಿಸ್ ಗೆಂದು ಬರುವವರ ಸಮಯ ವ್ಯರ್ಥವಾಗದಂತೆ ಅನುಕೂಲ ಒದಗಿಸಲು ಕುಶಾಲನಗರದಲ್ಲಿ ಕೇಂದ್ರ ಆರಂಭಿಸಿದ್ದು 14 ಲಕ್ಷ ವೆಚ್ಚದಲ್ಲಿ ಎರಡು ಯಂತ್ರಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಎಂಟಿ ರಿನಾಲ್ ಕೇರ್ ಸೊಲ್ಯೂಷನ್ ಅಧ್ಯಕ್ಷ ಪೊನ್ನಚ್ಚನಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ಡಯಾಲಿಸಿಸ್ ಸೆಂಟರ್ ಬಗ್ಗೆ ಮಾಹಿತಿ ಒದಗಿಸಿದರು. ದಾನಿಗಳ ಸಹಕಾರ ದೊರೆತಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಶೇ 50 ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಕನಿಷ್ಠ ದರದಲ್ಲಿ ಈ ಚಿಕಿತ್ಸೆ ಒದಗಿಸಲಾಗುವುದು. ದೂರದ ಸ್ಥಳಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದ ಕುಶಾಲನಗರದಲ್ಲಿ ಇರುವ 50 ಕ್ಕೂ ಅಧಿಕ ಮಂದಿ ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ
ಲಯನ್ಸ್ ನೂತನ ಅಧ್ಯಕ್ಷ ಸುಮನ್ ಬಾಲಚಂದ್ರ, ಕಾರ್ಯದರ್ಶಿ ಟಿ.ಕೆ.ರಾಜಶೇಖರ್, ನಿತಿನ್ ಎನ್ ಗುಪ್ತ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ, ಖಜಾಂಚಿ ಹೇಮಂತ್, ಮಾಜಿ ಅಧ್ಯಕ್ಷ ಕೊಡಗನಹರ್ಷ, ಲಯನ್ಸ್ ಜಿಲ್ಲಾ ಪ್ರಮುಖ
ಜಯರಾಂ ದೇರಪ್ಪಜ್ಜನ ಮನೆ, ಲಯನ್ಸ್ ಪ್ರಮುಖರು ಡಾ.ಪ್ರವೀಣ್, ಸತೀಶ್ ಕುಮಾರ್, ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
Back to top button
error: Content is protected !!