ಕುಶಾಲನಗರ, ಜು 06: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ 2023-24 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ 9 ಮಂದಿ ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿ ಅಧಿಕಾರ ಹಸ್ತಾಂತರಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಆರ್.ಮೋಹನ್ ಪ್ರಮಾಣ ಪತ್ರ ವಿತರಣೆ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭ ಚುನಾವಣೆ ಸುಸೂತ್ರವಾಗಿ ನಡೆಯಲು ಸಹಕಾರ ನೀಡಿದ ಸಂಘದ ಮಾಜಿ ಅಧ್ಯಕ್ಷ ಆರ್.ಮೋಹನ್, ಸಲಹೆಗಾರ ಶ್ಯಾಂ, ಕಾರ್ಯದರ್ಶಿ ಮಂಜು ಬೆಳ್ಳುಳ್ಳಿ, ಸಹ ಕಾರ್ಯದರ್ಶಿ ಕೆ.ಜಿ.ಕೃಷ್ಣ, ಖಜಾಂಚಿ ರಮೇಶ್,ಕಟ್ಟಡ ಸ್ಥಳ ದಾನಿ ನಾಗೇಶ್ ಅವರ ಪುತ್ರ ತೇಜಸ್ ಅವರನ್ನು ಅಭಿನಂದಿಸಲಾಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಕೃಷ್ಣದರ್ಶನ್, ಉಪಾಧ್ಯಕ್ಷರಾಗಿ ಮಾದೇವಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಗೌಡ, ಕಾರ್ಯದರ್ಶಿಯಾಗಿ ನವೀನ್, ಖಜಾಂಚಿ ಯಾಗಿ ಮುನೀರ್ ಅವರು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭ ಆಟೋ ಚಾಲಕರು,ಮಾಲೀಕರ ಸಂಘದ ಪ್ರಮುಖರು ಇದ್ದರು.
Back to top button
error: Content is protected !!