ಕುಶಾಲನಗರ, ಜೂ 20: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಗೆ ಚೆಕ್ಕನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಗೆ ಹಸ್ತಾಂತರಿಸಲಾಯಿತು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಪಿ.ಬಿ.ಯತೀಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯೋಗೇಂದ್ರ ನಾಯಕ್ ಅವರಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮತ್ತು ಆಡಳಿತ ಮಂಡಳಿಯವರು ಚೆಕ್ ಹಸ್ತಾಂತರಿಸಿದರು.
ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಲಾಭಾಂಶದ ಶೇಕಡವಾರು ಮೊತ್ತ ನೀಡಬೇಕಾಗಿರುವುದರಿಂದ 2022-2023ನೇ ಸಾಲಿನ ಲಾಭಾಂಶದಿಂದ ತೆಗೆದ ಶೇಕಡಾ 2 ರಷ್ಟು ಮೊತ್ತವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಜಿಲ್ಲೆಯಲ್ಲೇ ಪ್ರಥಮವಾಗಿ ನೀಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!