ಕುಶಾಲನಗರ, ಜೂನ್ 5: ಜಿಲ್ಲಾ ಪಂಚಾಯತ ,ಕೃಷಿ ಇಲಾಖೆ ಸೋಮವಾರಪೇಟೆ, ಪ್ರಧಾನ ಮಂತ್ರಿ ಸಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ ,ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 7 ನೇ ಹೊಸಕೋಟೆ ಪ್ರೌಢಶಾಲಾ ಸಭಾಂಗಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಪ ಕೃಷಿ ನಿರ್ದೇಶಕ ಡಾ, ಬಾಲ್ ರಾಜ್ ರಂಗರಾವ್ ನೆರವೇರಿಸಿ ನಂತರ ಮಾತಾಡುತ್ತಾ ಪರಿಸರ ಜಾಗ್ರತೆಯ ಮಹತ್ವ, ನೀರು ಸಂರಕ್ಷಣೆ, ಮರಗಳ ಬೆಳೆಸುವ ವಿಧಾನಗಳು ಪ್ರತಿಯೊಬ್ಬರೂ ತಿಳಿದುಕೊಂಡು ಅದರ ಮೂಲಕ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಪರಿಸರ ಸುರಕ್ಷಿತವಾಗಿರುತ್ತೆದೆ ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ, ಚಂದ್ರಶೇಖರ್ ನವರು ಪರಿಸರ ಸಂರಕ್ಷಣೆ, ಮತ್ತು ಅದರ ಉಳಿಯುವಿನ ಮಹತ್ವದ ಬಗ್ಗೆ ಸಮರ್ಪಕವಾದ ಮಾಹಿತಿ ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್, ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು, ಕೃಷಿ ಅಧಿಕಾರಿ ನವ್ಯನಾಣಯ್ಯ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು, ಮತ್ತು ನೂರಾರು ಪುರುಷ, ಮತ್ತು ಮಹಿಳಾ ರೈತರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಆವರಣದಲ್ಲಿ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದ ಮತ್ತು ಹಣ್ಣಿನ ಗಿಡಗಳನ್ನು ನೀಡಲಾಯಿತು.
Back to top button
error: Content is protected !!