ಕುಶಾಲನಗರ, ಏ.12: ನಂದಿನಿ ಸಂಸ್ಥೆಯೊಂದಿಗೆ ಅಮುಲ ವಿಲೀನ ಚಿಂತನೆ ಬಗ್ಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ವಿ.ಜೆ.ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು,
ಬೆಲೆ ಏರಿಕೆ, ದುಬಾರಿ ಜೀವನಕ್ಕೆ ಕಂಗೆಟ್ಟಿರುವ ರೈತಾಪಿ ವರ್ಗ ಕೃಷಿಯಿಂದ ನಿರೀಕ್ಷಿತ ಲಾಭ ಸಿಗದ ಕಾರಣ ಕೃಷಿಯ ಜೊತೆ ಹಸು ಸಾಕಾಣಿಕೆಯೊಂದಿಗೆ ಹಾಲು ವ್ಯಾಪಾರ ಮಾಡಿ ತಮ್ಮ ಬದುಕು ಕಟ್ಟಿಕೊಳ್ಳುತಿದ್ದಾರೆ. ಇವರ ಬೆಂಬಲವಾಗಿ ನಂದಿನಿ ಸಂಸ್ಥೆ ಅಶ್ರಯವಾಗಿ ನಿಂತಿದ್ದು ರಾಜ್ಯದ ಜನತೆಯ ಮನೆ ಮನೆಯಲ್ಲಿ ನಂದಿನಿ ಹಾಲಿನ ಹೆಸರು ಜೀವನದಲ್ಲಿ ಬೆರತುಹೋಗಿದೆ. ಆದರೆ ಇಂತಹ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಅಮೂಲ್ ಹಾಲಿನ ಕಂಪನಿಯೊಂದಿಗೆ ನಂದಿನಿಯನ್ನು ವಿಲಿನಗೊಳಿಸುವ ಸಂಚು ನಡೆಯುತಿದ್ದು ಇದು ಕರ್ನಾಟಕ ರಾಜ್ಯದ ರೈತಾಪಿವರ್ಗಕ್ಕೆ ಮಾಡುವ ವಂಚನೆಯಾಗಿದ್ದು ಇದರ ವಿರುಧ್ದ ಕಾಂಗ್ರೆಸ್ ಕಿಸಾನ್ ಘಟಕ ರೈತರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
Back to top button
error: Content is protected !!