ಕುಶಾಲನಗರ, ಮಾ 31: ನೂತನ ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ಮಾ.28 ರಂದು ಉದ್ಘಾಟನೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾದ ಲಾಂಛನ ಹಾಗೂ ಧ್ಯೇಯವಾಕ್ಯ ರೂಪಿಸಲು ಆಸಕ್ತ ರಿಂದ ಆಹ್ವಾನಿಸಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು,ಪ್ರಾಧ್ಯಾಪಕ ವೃಂದ,ಶಿಕಕ್ಷೇತರ ಸಿಬ್ಬಂದಿ ಸೇರಿದಂತೆ ಕೊಡಗಿನ ಸಮಸ್ತ ಜನತರಯೊಂದಿಗೆ ರಾಜ್ಯದ, ರಾಷ್ಟ್ರದ ಹಾಗೂ ಅಂತರಾಷ್ಟ್ರೀಯ ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕೆಂದು ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಡಾ.ಅಶೋಕ್ ಎಸ್.ಅಲೂರ ಮನವಿ ಮಾಡಿದ್ದಾರೆ. ಅತ್ಯುತ್ತಮ ಲಾಂಛನ ಹಾಗೂ ಧ್ಯೇಯವಾಕ್ಯ ಸೂಚಿಸಿದವರಿಗೆ ಸೂಕ್ತ ಪುರಸ್ಕಾರ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಏಪ್ರಿಲ್ 15 ಆಗಿದ್ದು, ಹೆಚ್ಚಿನ ವಿವರಗಳಿಗೆ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಕೆ.ಧರ್ಮಪ್ಪ (ಮೊ.ನಂ.9008162862)dharmappa@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Back to top button
error: Content is protected !!