ಕಾರ್ಯಕ್ರಮ

ಬಿಜೆಪಿ ಸೋಮವಾರಪೇಟೆ ಮಂಡಲದ ಎಸ್.ಟಿ.ಮೋರ್ಚಾ ಸಮಾವೇಶ

ಕುಶಾಲನಗರ, ಮಾ 21:
ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ಎಸ್.ಟಿ.ಮೋರ್ಚಾ ಸಮಾವೇಶ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ‌ ಅಪ್ಪಚ್ಚುರಂಜನ್ ಸಮಾವೇಶ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತುಳಿತಕ್ಕೆ‌ ಒಳಗಾದ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಿದ ಕೀರ್ತಿ‌ ಭಾರತೀಯ ಜನತಾ ಪಾರ್ಟಿಗೆ ಸಲ್ಲಬೇಕಿದೆ. ಎಸ್.ಸಿ.ಎಸ್ಟಿ ಜನಾಂಗಕ್ಕೆ ಸೇರಿದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಸಂಸದರಾಗಿರುವುದು ಬಿಜೆಪಿ ಸರಕಾರದಲ್ಲಿ. ಆದಿವಾಸಿ ನಾಯಕ ಬಿರ್ಸಾ ಮುಂಡ ಹೆಸರಿನಲ್ಲಿ ಬಿಜೆಪಿ ಸರಕಾರ ದೆಹಲಿಯಲ್ಲಿ ಹಾಕಿ ಸ್ಟೇಡಿಂ ಸ್ಥಾಪಿಸಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವಧಿಯಲ್ಲಿ ಎಸ್ ಸಿ ಎಸ್ಟಿ ಕಾಲನಿಗಳು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲಾಯಿತು ಎಂದರು. ಸಮುದಾಯದವರನ್ನು ಸಂರಕ್ಷಿಸುವ ಕೆಲಸ ಬಿಜೆಪಿ ಪಕ್ಷದಿಂದ ಮಾಡಲಾಗುತ್ತಿದೆ ಎಂದರು.
ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಮಿಟ್ಟು ರಂಜಿತ್ ಮಾತನಾಡಿ, ಆದಿವಾಸಿ ಸಮುದಾಯಕ್ಕೆ ನಿಗಮ‌ ಮಂಡಳಿ ಸ್ಥಾಪಿಸಲು ಶಾಸಕರು ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.
ಎಸ್.ಟಿ.ಘಟಕದ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜನಪರ ಆಡಳಿತದ ಕಾರಣಕ್ಕೆ ಅತಿ ಹೆಚ್ಚಿನ‌ ಸಂಖ್ಯೆಯಲ್ಲಿ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಹೊರತು ಯಾವುದೇ ಆಮೀಷಕ್ಕೆ ಒಳಗಾಗಿ ಅಲ್ಲ ಎಂದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ದ.ಕ.ಪ್ರಭಾರಿ ಬಿ.ಬಿ.ಭಾರತೀಶ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಎಸ್.ಟಿ.ಘಟಕದ ರಾಜ್ಯ ಕಾರ್ಯದರ್ಶಿ ಮಂಜುಳಾ, ಬಿ.ಕೆ.ಮೋಹನ್, ಎಸ್.ಟಿ.ಮೋರ್ಚಾ ತಾಲೂಕು ಅಧ್ಯಕ್ಷ ರವಿ, ನಗರ ಘಟಕ ಅಧ್ಯಕ್ಷ ಚಂದ್ರಶೇಖರ್, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಬಸವನಹಳ್ಳಿ‌ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರ, ಬ್ಯಾಡಗೊಟ್ಟ ಹಾಡಿ ಮುಖಂಡ ಸಿದ್ದು, ಗುಡ್ಡೆಹೊಸೂರು ಗ್ರಾಪಂ ಸದಸ್ಯೆ‌ ಉಮಾ, ಪ್ರಮುಖರಾದ ಮಂಜು ನಾಯಕ್, ಮಲ್ಲೇಶ್, ಕಾಳಯ್ಯ, ಲೋಕೇಶ್, ಗೀತಾ, ಸುರೇಶ್,
ಸಮಾವೇಶದಲ್ಲಿ ಎಸ್.ಟಿ.ಮುಖಂಡರುಗಳಿಗೆ, ಎಸ್.ಟಿ.ಸಮುದಾಯದ ಗ್ರಾಪಂ‌ ಜನಪ್ರತಿನಿಧಿಗಳನ್ನು‌ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ‌ ಮುನ್ನ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ಸಾಗಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!