ಕುಶಾಲನಗರ, ಮಾ 20:
ಶನಿವಾರಸಂತೆ ಸಮೀಪದ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಬಾವಿ ಬಸವಣ್ಣ ಪೂಜಾ ಕಾರ್ಯಕ್ರಮವು ಸೋಮವಾರದಂದು ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೇರವೇರಿತು .ಶನಿವಾರಸಂತೆ ಸುತ್ತಮುತ್ತಲಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸಿದ್ದರು ಈ ಬಾರಿ ಶನಿವಾರಸಂತೆ ಯಸಳೂರು ಸುತ್ತಮುತ್ತಲಿನ ಹಲವಾರು ಗ್ರಾಮದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು ಪ್ರತಿವರ್ಷ ಈ ಪೂಜಾ ಕಾರ್ಯಕ್ರಮವನ್ನು ಬಹಳ ಧಾರ್ಮಿಕ ಶ್ರದ್ಧೆ ಯಿಂದ ಆಚರಿಸುತ್ತಾರೆ ಇಲ್ಲಿಯ ಕಲ್ಯಾಣಿಯಲ್ಲಿ ವರ್ಷಂ ಪೂರ್ತಿ ನೀರು ತುಂಬಿರುತ್ತದೆ ಉದ್ಭವ ಬಸವಣ್ಣನ ಮೂರ್ತಿಯಿಂದ ಹರಿದುಬರುವ ಜಲ ಕಲ್ಯಾಣಿ ಸೇರುತ್ತದೆ ಕಲ್ಯಾಣಿಗೆ ಪ್ರತಿವರ್ಷ ಆಗಮಿಸುವ ಭಕ್ತರು ಹಾಕುವ ನಾಣ್ಯಗಳನ್ನು ಮುಂದಿನ ವರ್ಷದ ಪೂಜಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ ಗ್ರಾಮ ವ್ಯಾಪ್ತಿಯ ಜಾನುವಾರುಗಳನ್ನು ಈ ಬಾವಿ ಬಸವಣ್ಣ ರಕ್ಷಿಸುತ್ತಾನೆ ಎಂಬ ಪ್ರತೀತಿ ಇದೆ ಪೂಜಾ ದಿನದಂದು ಗ್ರಾಮದ ಮನೆಗಳಿಂದ ಅಕ್ಕಿ ಬೆಲ್ಲ ತರಕಾರಿ ತೆಂಗಿನಕಾಯಿಯ ನನ್ನು ಪ್ರಸಾದ ತಯಾರಿಕೆಗೆ ನೀಡಲಾಗುತ್ತದೆ.ಹರಕೆ ಹೊತ್ತು ಈಡೇರಿದವರು ತೆಂಗಿನಕಾಯಿಯನ್ನು ಹೊಡೆಯುವುದು ಇಲ್ಲಿಯ ವಿಶೇಷ ಕೆಲವರು 101 ತೆಂಗಿನಕಾಯಿಗಳವರೆಗು ಕೂಡ ಹೊಡೆಯುತ್ತಾರೆ ಅಲ್ಲದೆ ಎಳೆಯ ಮಕ್ಕಳ ಮುಡಿ ತೆಗೆಯುವ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಹರಕೆ ರೂಪದಲ್ಲಿ ಇಲ್ಲಿ ಮಾಡಲಾಗುತ್ತದೆ ಈ ಗ್ರಾಮದಿಂದ ಮದುವೆಯಾಗಿ ಹೊರ ಹೊರ ಊರುಗಳಿಗೆ ಹೋದ ಹೆಣ್ಣುಮಕ್ಕಳು ಪೂಜಾ ದಿನದಂದು ತವರಿಗೆ ಆಗಮಿಸಿ ಈ ಪೂಜಾ ಕಾರ್ಯಕ್ರಮದಲ್ಲಿಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ ಆಚರಣೆಯಾಗಿದೆ.
Back to top button
error: Content is protected !!