ಕುಶಾಲನಗರ ಮಾ 11: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಹಾಗೂ ಜನರ ಹಿತ ಕಾಪಾಡಲು ಸಾಧ್ಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ.ಎಸ್.ಅನಂತ್ ಕುಮಾರ್ ಇಂದಿಲ್ಲಿ ತಿಳಿಸಿದರು. ಶನಿವಾರ ಸಂತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಆರ್.ಧ್ರುವ ನಾರಾಯಣ್ ರವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯದ ಜನವಿರೋಧಿ ಅಲೆ ಮತ್ತು ಬಡವರ ಸಂಕಷ್ಟಗಳನ್ನು ಅರಿಯದ ಸರ್ಕಾರಗಳ ಮಲತಾಯಿ ಧೋರಣೆಯನ್ನು ರಾಜ್ಯ ಹಾಗೂ ಜಿಲ್ಲೆಯ ಜನತೆ ಅರಿತ್ತಿದ್ದಾರೆ. ಬಡವರ. ಅಲ್ಪಸಂಖ್ಯಾತರ. ದಿನದಲಿತರ. ಸಂಕಷ್ಟಗಳ ನಿವಾರಣೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಬಿ.ಜೆ.ಪಿ. ಸರ್ಕಾರವು 40% ಕಮಿಷನ್ ಸರ್ಕಾರವಾಗಿದ್ದು ಅತ್ಯಂತ ಬ್ರಹ್ಮಾಂಡ ಭ್ರಷ್ಟಾಚಾರದಿಂದ ತನ್ನ ಅಧಿಕಾರದ ಅವಧಿಯನ್ನು ಮುಗಿಸಿದೆ. ರಾಜ್ಯ ಹಾಗೂ ಜಿಲ್ಲೆಯ ಜನತೆ ಇವರ ಅಧಿಕಾರದಿಂದ ಬೇಸತ್ತಿ ಇದೀಗ ರಾಜ್ಯ ಹಾಗೂ ಕೇಂದ್ರ ಹಾಗೂ ಜಿಲ್ಲೆಯಾದ್ಯಂತ ಬದಲಾವಣೆಯ ಅಲೆ ಸೃಷ್ಟಿಯಾಗಿದೆ. ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ 150ಕ್ಕೂ ಅಧಿಕ ಜನಪರ ಯೋಜನೆಗಳ ಫಲವನ್ನು ರಾಜ್ಯದ ಜನತೆ ಪಡೆದುಕೊಂಡಿದ್ದು ಆ ಯೋಜನೆಗಳ ಮಹತ್ವ ಏನೆಂಬುದನ್ನು ಜನತೆಗೆ ಈಗಾಗಲೇ ಮನವರಿಕೆ ಮಾಡಿಕೊಂಡಿದ್ದಾರೆ.ಆ ನಿಟ್ಟಿನಲ್ಲಿ ಜನರು ಬದಲಾವಣೆ ಬಯಸಿ ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ಭರವಸೆಯಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲರು ಒಗ್ಗೂಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಇದೇ ಸಂದರ್ಭ ತಿಳಿಸಿದರು. ನಂತರ ಇಂದು ಬೆಳಿಗ್ಗೆ ನಿಧನರಾದ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷರಾಗಿ ದ್ದ ಆರ್. ಧ್ರುವನಾರಾಯಣ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಚ್.ವಿ. ಜಯಮ್ಮ. ಪ್ರಮುಖರಾದ ಎಸ್ ಕೆ ವೀರಪ್ಪ. ಕಾಂಗ್ರೆಸ್ ವಕ್ತಾರ ಸುರೇಶ್. ಶರೀಫ್. ಇಬ್ರಾಹಿಂ. ಹೂವಯ್ಯ. ಸೇರಿದಂತೆ ಸುಮಾರು 500ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.
Back to top button
error: Content is protected !!