ಕಾರ್ಯಕ್ರಮ

ಹೆಬ್ಬಾಲೆ-ಹಳಗೋಟೆ ವೀರ ಮಡಿವಾಳ ಮಾಚಿದೇವರ ಸಂಘದ ಆಶ್ರಯದಲ್ಲಿ ಮಾಚಿದೇವರ ಜಯಂತಿ

ಕುಶಾಲನಗರ, ಫೆ 24: ಹೆಬ್ಬಾಲೆ-ಹಳಗೋಟೆ ಗ್ರಾಮಗಳ ವೀರ ಮಡಿವಾಳ ಮಾಚಿದೇವರ ಸಂಘದ ಆಶ್ರಯದಲ್ಲಿ ಮಾಚಿದೇವರ ಜಯಂತಿ ಕಾರ್ಯಕ್ರಮ ಹೆಬ್ಬಾಲೆ ಗ್ರಾಮದ ವೃತ್ತದ ಬಳಿ ನಡೆಯಿತು. ಸಂಘದ ಅಧ್ಯಕ್ಷರಾದ ಎಚ್.ಬಿ.ಮಲ್ಲೇಶ್ ಅಧ್ಯಕ್ಷತೆಯಲ್ಲಿ ನಡೆದ‌ ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಕಟಿಲು ಸಂಜೀವ ಮಡಿವಾಳ ಉದ್ಘಾಟಿಸಿದರು. ಮಡಿವಾಳ ಮಾಚಿದೇವರ‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಜೀವ‌ ಮಡಿವಾಳ, ತಳಮಟ್ಟದಿಂದ ಸಮುದಾಯವನ್ನು ಸಂಘಟಿಸಿ ಬೆಳೆಸಬೇಕಿದೆ. ಗ್ರಾಮ‌ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿ ಸಮರ್ಥ ನಾಯಕತ್ವದ ಮೂಲಕ ಸಂಘಗಳನ್ನು ರಚಿಸಿ ಸಮುದಾಯ ಅಭಿವೃದ್ದಿಗೆ ಒತ್ತು‌ ನೀಡಬೇಕು. ಕುಟುಂಬ ಆಪ್ ಬಳಸಿ ಸದಸ್ಯರಾದಲ್ಲಿ ಆ ಮೂಲಕ ಅಗತ್ಯ ಮಾಹಿತಿ ವಿನಿಮಯ ಸಾಧ್ಯ. ಸಂಘಟನೆ‌ ಮೂಲಕ

ಸರಕಾರದ ಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದುವಂತಾಗಬೇಕಿದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆಯ ಉದ್ಯಮಿ ಮಂಜುನಾಥ್ ‌ಮಾಚಿದೇವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಪ್ರಸನ್ನ ಕುಮಾರ್ ಮಾತನಾಡಿ, ಮಾಚಿದೇವರು ಭೂಮಿಯ ಮೇಲೆ ವೀರಭದ್ರನ ಅವತಾರ ತಾಳಿ ಜನಿಸಿದವರು ಎಂದು ಬಣ್ಣಿಸಿದರು.

ಹೆಬ್ಬಾಲೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನೆರೆದಿದ್ದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಕುಮಾರ್, ಪ್ರಮುಖರಾದ ರಾಮಶೆಟ್ಟಿ, ನೀಲಪ್ಪ, ಹೆಬ್ಬಾಲೆ-ಹಳಗೋಟೆ ಸಂಘದ ಕಾರ್ಯದರ್ಶಿ ಮಂಜು, ಪ್ರಮುಖರಾದ ನಾಗರಾಜ್, ಮಹದೇವ್, ಮಹೇಶ್, ಯೋಗೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!