ಕುಶಾಲನಗರ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಕುಶಾಲನಗರ, ಜ 29: ಕುಶಾಲನಗರ ತಾಲ್ಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ಫೆ.3 ರಂದು ನಡೆಯಲಿರುವ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಭಾನುವಾರ ಬಿಡುಗಡೆಗೊಳಿಸಿದರು.
ಕುಶಾಲನಗರ ತಾಲ್ಲೂಕು ರಚನೆಯಾದ ನಂತರ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ತಾಲ್ಲೂಕು ಕನ್ನಡ
ಸಾಹಿತ್ಯ ಸಮ್ಮೇಳನ
ಯಶಸ್ವಿಗೆ ಎಲ್ಲರೂ
ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷ ಜೈವರ್ಧನ್ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಸಭೆ ವತಿಯಿಂದ ಸಂಪೂರ್ಣ
ಸಹಕಾರ ನೀಡಲಾಗುವುದು. ಪುರಸಭೆ ವತಿಯಿಂದ ನಗರದ ಅಲಂಕಾರ ಮಾಡಲಾಗುವುದು ಎಂದರು.
ಹಣಕಾಸು ಉಪ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಹಲವು ದಶಕಗಳ ಹೋರಾಟದ ಪ್ರತಿಫಲದಿಂದ ರಚನೆಗೊಂಡ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕುಶಾಲನಗರ ತಾಲ್ಲೂಕು ಪ್ರಥಮ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ,ಎಲ್ಲರೂ ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್ ಮಾತನಾಡಿದರು.
ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಡೆನಿಸ್ ಡಿ’ ಸೋಜ,
ಪುರಸಭೆ ಸದಸ್ಯರಾದ ಎಂ.ವಿ.ನಾರಾಯಣ್, ವಿ.ಎಸ್.ಆನಂದಕುಮಾರ್, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಲಿಂಗಮೂರ್ತಿ,
ವಿವಿಧ ಉಪ ಸಮಿತಿಯ ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ವೆಂಕಟೇಶ್ ಪೂಜಾರಿ, ಎಸ್.ನಾಗರಾಜ್, ಪರಮೇಶ್, ಎಂ.ಎನ್.ಕಾಳಪ್ಪ, ಟಿ.ಜಿ.ಪ್ರೇಮಕುಮಾರ್, ನಾಗೇಗೌಡ, ಎಸ್.ನಾಗರಾಜ್, ಕೆ.ಎನ್.ದೇವರಾಜ್, ಟಿ.ಬಿ.ಮಂಜುನಾಥ್, ಸೂದನ ರತ್ನಾವತಿ,ಕೆ.ವಿ.ಉಮೇಶ್ ಇತರರು ಇದ್ದರು.
ಚಿತ್ರ : ಕುಶಾಲನಗರದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಬಿಡುಗಡೆಗೊಳಿಸಿದರು.
ಎಲ್ಲರೂ ಸೇರಿ ಕನ್ನಡ ನಾಡು- ನುಡಿ, ಸಂಸ್ಕೃತಿ ಬೆಳೆಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸಬೇಕು ಎಂದರು.