ಕುಶಾಲನಗರ, ಜ 02: ಕಳೆದ ವಾರದ ನಡೆದ ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹಕ್ಕುಪತ್ರ ಒದಗಿಸಲು ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಕೆಲವು ಸದಸ್ಯರ ಆರೋಪಕ್ಕೆ ವಿರೋಧ ವ್ಯಕ್ತಗೊಂಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಗ್ರಾಪಂ ಸದಸ್ಯರಾದ ದಿನೇಶ್, ಗಿರೀಶ್, ಮಣಿಕಂಠ, ಈರಯ್ಯ, ಜ್ಯೋತಿ, ಭಾಗ್ಯರವಿ, ದೀಪ, ಶಶಿಕಲಾ ಅವರು, ಅಕ್ರಮ ಸಕ್ರಮದಡಿ ಹಕ್ಕುಪತ್ರ ಮಂಡಿಸಲು ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಪಲಾನುಭವಿಗಳಿಂದ ಹಣ ಪಡೆದಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಹಣ ಪಡೆದಿದ್ದಾರೆ ಎಂದು ಹಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಹಣ ಪಡೆದಿರುವುದು ಸತ್ಯ ಎಂದಾದರೆ ಸಾಕ್ಷಿ ಸಮೇತ ಹಾಜರುಪಡಿಸಲು ಆಗ್ರಹಿಸಿದರು. ಯಾವುದೋ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ತುಂಬಿದ ಸಭೆಯಲ್ಲಿ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಜವಾಬ್ದಾರಿ ಹೊತ್ತ ಸದಸ್ಯರೇ ಹೀಗೆ ಹಿಡಿತ ತಪ್ಪಿ ಮಾತನಾಡಿದರೆ ಜನಸಾಮಾನ್ಯರಲ್ಲಿ ಪಂಚಾಯಿತಿ ಬಗ್ಗೆ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಯಾವ ಪರಿಣಾಮ ಬೀಳುತ್ತದೆ ಎಂದು ತಿಳಿದು ಮಾತನಾಡುವುದು ಒಳಿತು. ವೈಯಕ್ತಿಕ ದ್ವೇಷಗಳನ್ನು ಹೊರಗೆ ಇಟ್ಟುಕೊಳ್ಳುವುದು ಒಳಿತು. ಬಾಯಿಗೆ ಬಂದಂತೆ ಮಾತನಾಡಲು ಧೈರ್ಯ ಇದೆಯೆಂದರೆ ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಲು ಯಾಕೆ ಮುಂದಾಗುತ್ತಿಲ್ಲ. ಇದರಲ್ಲಿ ಆರೋಪ ಮಾಡುತ್ತಿರುವವರ ಕೈವಾಡವೇ ಇರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮಡಿಕೇರಿ ಕ್ಷೇತ್ರ ಶಾಸಕರ ಶ್ರಮ, ನಿಷ್ಠೆ ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಹಕ್ಕುಪತ್ರ ದಿಂದ ವಂಚಿತರಾಗಿದ್ದ ಜನಸಾಮಾನ್ಯರಿಗೆ ಉಚಿತವಾಗಿ ನೀಡಲಾಗಿದೆ. ಅದಕ್ಕೆ ಪಂಚಾಯಿತಿಯ ಕೆಲವೇ ಸದಸ್ಯರ ಶ್ರಮ ಕಾರಣ ಎಂದು ಹೇಳಬಹುದು. ತಮ್ಮ ವಯಕ್ತಿಕ ಕಾರ್ಯಗಳನ್ನು ಬದಿಗೊತ್ತಿ ಹಕ್ಕು ಪತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರೊಂದಿಗಿನ ನಿರಂತರ ಸಂಪರ್ಕದಿಂದ ಈ ಪಂಚಾಯಿತಿ ವ್ಯಾಪ್ತಿಗೆ ಸುಮಾರು 80 ರಿಂದ 90 ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ., ಇದು ಶಾಸಕರ ಉತ್ತಮ ಕಾರ್ಯ ಸಾಧನೆ ಆಗಿದ್ದು ಇದನ್ನು ಸಹಿಸದ ಕೆಲವು ಸದಸ್ಯರು ತಾವೇ ಹುಟ್ಟಿ ಹಾಕಿದ ಸಂಚು ಇದಾಗಿದೆ ಎಂದು ಆರೋಪಿಸಲಾಗಿದೆ.
Back to top button
error: Content is protected !!