ಕುಶಾಲನಗರ, ಡಿ 13: ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನಲೆಯಲ್ಲಿ ನಗರ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ನಡೆದ ಸಂಭ್ರಮಾಚರಣೆ ಸಂದರ್ಭ
ಬಿಜೆಪಿ ಸರಕಾರ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಶಾಸಕ ಅಪ್ಪಚ್ಚುರಂಜನ್ ಪರ ಜೈಕಾರ ಮೊಳಗಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿಸುವಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರ ಪಾತ್ರ ದೊಡ್ಡದಿದೆ ಎಂದರು.
ಪುರಸಭೆಗೆ ಸಹಕಾರ ನೀಡಿದ ಮುಳ್ಳುಸೋಗೆ, ಗುಡ್ಡೆಹೊಸೂರು ಗ್ರಾಪಂ ಹಾಗೂ ಕುಶಾಲನಗರ ಪಟ್ಟಣ ಪಂಚಾಯ್ತಿಯ ಪ್ರಸಕ್ತ ಹಾಗೂ ಹಿಂದಿನ ಆಡಳಿತ ಮಂಡಳಿಗೆ, ಅಧಿಕಾರಿ ವರ್ಗದವರಿಗೆ ಅವರು ಧನ್ಯವಾದ ಸಲ್ಲಿಸಿದರು.
ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಅವಕಾಶವಿರುವ ಕಾರಣ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ ಎಂದರು.
ಪಪಂ ಸದಸ್ಯ ಅಮೃತ್‌ರಾಜ್ ಮಾತನಾಡಿ, ಬಿಜೆಪಿ ಸರಕಾರ ಸದಾ ಅಭಿವೃದ್ಧಿ ಪರ. ಇದಕ್ಕೆ ಸ್ಪಷ್ಟ ನಿದರ್ಶನ ಕುಶಾಲನಗರ ತಾಲೂಕು, ಇದೀಗ ಪುರಸಭೆ ರಚನೆಗೆ ಶಾಸಕ ಅಪ್ಪಚ್ಚುರಂಜನ್ ಅವರ ಶ್ರಮ ಎಂದರು.
ಈ ಸಂದರ್ಭ ಪಪಂ ಸದಸ್ಯರಾದ ರೂಪಾ ಉಮಾಶಂಕರ್, ನಾರಾಯಣ, ಡಿ.ಕೆ.ತಿಮ್ಮಪ್ಪ, ಕೆ.ಜಿ.ಮನು, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಶಿವಾಜಿ, ವೇದಾವತಿ, ಮಧುಸೂದನ್, ಪುಂಡರೀಕಾಕ್ಷ, ವೈಶಾಖ್, ಬೋಸ್ ಮೊಣ್ಣಪ್ಪ, ರಾಮಚಂದ್ರ, ವರದ, ಸೋಮಣ್ಣ, ಚಂದ್ರಶೇಖರ್, ನಿಸಾರ್, ಅನುದೀಪ್, ಮತ್ತಿತರರು ಇದ್ದರು.
Back to top button
error: Content is protected !!