ಕಾರ್ಯಕ್ರಮ

ಕುಶಾಲನಗರದ ಕಾವೇರಿ ನಿಸರ್ಗಧಾಮದ ತಾತ್ಕಾಲಿಕ ನೂತನ ಸೇತುವೆ ಉದ್ಘಾಟನೆ

ಕುಶಾಲನಗರ, ನ 27: ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗುಸೇತುವೆ ದುರಸ್ಥಿ ಕಾರ್ಯ ಹಿನ್ನಲೆ ಪ್ರವಾಸಿ ತಾಣಕ್ಕೆ ಪ್ರವೇಶಿಸಲು ತಾತ್ಕಾಲಿಕವಾಗಿ ನಿರ್ಮಿಸಿರುವ ಪರ್ಯಾಯ ಸೇತುವೆಯನ್ನು ಭಾನುವಾರ ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು.

ಅಂದಾಜು 5 ಲಕ್ಷ ವೆಚ್ಚದಲ್ಲಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ‌ ನಿರ್ಮಿಸಲಾಗಿದೆ. 2800 ಮರಳಿನ ಮೂಟೆ,9 ಸಿಮೆಂಟ್ ಪೈಪ್ ಗಳನ್ನು ನದಿಗೆ ಅಡ್ಡಲಾಗಿ ಅಳವಡಿಸಿ ಅದರ ಮೇಲೆ ಮರದ ಹಲಗೆಗಳನ್ನು ಹಾಕಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭ ಡಿಎಫ್ ಒ ಎ.ಟಿ. ಪೂವಯ್ಯ, ಎಸಿಎಫ್ ಗೋಪಾಲ್, ಆರ್ ಎಫ್ ಒ ಗಳಾದ ಶಿವರಾಂ, ಚೇತನ್, ಡಿಆರ್ ಎಫ್ ಒ ವಿಲಾಸ್ ಮತ್ತು ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!