ಪ್ರಕಟಣೆ

ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ

ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ನವೆಂಬರ್ 21 ರ ಕಡೆಯ ಕಾರ್ತಿಕ ಸೋಮವಾರದಂದು ಬೆಳಗ್ಗೆ 5 ಗಂಟೆಗೆ ಲಕ್ಷಪುಷ್ಪ ಬಿಲ್ವಾರ್ಚನೆ

ಕುಶಾಲನಗರ, ನ 19:ಕರ್ನಾಟಕ ರತ್ನ, ಪದ್ಮಭೂಷಣ , ತ್ರಿವಿಧ ದಾಸೋಹಿ, ಶತಾಯುಷಿ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರು ಶತಮಾನದ ಆದರ್ಶ, ನಡೆದಂತೆ ನುಡಿದರು, ನುಡಿದದ್ದು ಗ್ರಂಥವಾಗುವಂತೆ ನಡೆದ ಆಧುನಿಕ ಬಸವಣ್ಣನವರಾಗಿ ಬಾಳಿದ ಮಹಾನ್ ಚೇತನ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು. ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ ಶ್ರೀ ಸಿದ್ದಗಂಗಾ ಮಠದಲ್ಲಿ ನಾವು ಕಾಣಬಹುದು, ಉದ್ದಾನ ಶಿವಯೋಗಿಗಳವರ ಆದಿಯಾಗಿ, ಶಿವಕುಮಾರ ಮಹಾಶಿವಯೋಗಿಗಳವರು ಶ್ರೀಮಠವನ್ನು ಕಟ್ಟಿ ಬೆಳೆಸಿ ಇಂದು ಜಾತಿ ಮತ ಧರ್ಮವನ್ನೂ ಮೀರಿ ಸಾವಿರಾರು ವಿದ್ಯಾರ್ಥಿಗಳ, ನೂರಾರು ಕುಟುಂಬಗಳ ಆಸರೆ ಶ್ರೀಮಠ. ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಕಳೆದ 11 ವರ್ಷಗಳಿಂದ ರಾಜ್ಯಾದ್ಯಂತ ಸಮುದಾಯ ಸಂಘಟಿಸಿ ಮನೆಮಾತಗಿರುವ ವೇದಿಕೆಯಾಗಿದೆ. ಕಳೆದೆರಡು ವರ್ಷದಂತೆಯೇ ಈ ವರ್ಷವೂ ಸಹ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ನವೆಂಬರ್ 21 ರ ಕಡೆಯ ಕಾರ್ತಿಕ ಸೋಮವಾರದಂದು ಬೆಳಗ್ಗೆ 5 ಗಂಟೆಗೆ ಲಕ್ಷಪುಷ್ಪ ಬಿಲ್ವಾರ್ಚನೆ ಆರಂಭವಾಗಿಲಿದ್ದು ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಮಧ್ಯಾಹ್ನ 2:30 ಕ್ಕೆ ಕಲಾತಂಡಗಳೊಂದಿಗೆ ಶ್ರೀಗಳ ಪುತ್ಥಳಿ ಮೆರವಣಿಗೆ, ಸಂಜೆ 6 ಗಂಟೆಯಿಂದ ಸಾಂಸ್ಕೃತಿ ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಶಾಂತ್ ಕಲ್ಲೂರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!