ಕುಶಾಲನಗರ: ನ 11: ಕುಶಾಲನಗರದಲ್ಲಿ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನ ಶುಕ್ರವಾರದಿಂದ ಆರಂಭವಾಗುತ್ತಿದೆ ಎಂದು ಸರ್ಕಸ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನೀತಿಗಳ ನಂತರ ಪ್ರಾಣಿಗಳು ಇಲ್ಲದ ನೋವು ಕಾಡುತ್ತಿದ್ದರೂ ನಾಯಿ, ಗಿಳಿಗಳನ್ನು ಬಳಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಲಾಗುತ್ತಿದೆ. ರಷ್ಯಾ, ಇಥಿಯೋಪಿಯಾ ಸೇರಿದಂತೆ ವಿದೇಶದ ಕಲಾವಿದರೂ ಇದ್ದಾರೆ. ಸರ್ಕಸ್‌ನಂತಹ ಕಲೆಗೆ ಪ್ರೋತ್ಸಾಹದ ಅಗತ್ಯವಿದ್ದು, ಇನ್ನೂ 30 ದಿನಗಳ ಕಾಲ ಕುಶಾಲನಗರದಲ್ಲಿ ಇರುವ ಕ್ಯಾಂಪ್‌ನಲ್ಲಿ ಸರ್ಕಸ್‌ವೀಕ್ಷಿಸಲು ಆಗಮಿಸುವಂತೆ ಆಹ್ವಾನ ನೀಡಿದರು.
ಸರ್ಕಸ್ ಕಂಪೆನಿಯ ಮಾಲೀಕ ಸಂಜೀವ ಮಾತನಾಡಿ, ತಮ್ಮ ಸಂಸ್ಥೆ 1920ರಲ್ಲಿ ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಆರಂಭವಾಯಿತು. ಅತ್ಯಂತ ಹಳೆಯ ಸರ್ಕಸ್ ಕಂಪೆನಿಯಾಗಿದ್ದು, ಮನೋರಂಜನೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಕಂಪೆನಿಯ ಪಿಆರ್‌ಒ ಪ್ರೇಮನಾಥ್ ಮಾತನಾಡಿ, ಪ್ರತಿದಿನ ಮಧ್ಯಾಹ್ನ 1, ಸಂಜೆ 1 ಹಾಗೂ 7 ಗಂಟೆಗೆ ಪ್ರದರ್ಶನಗಳು ಇರುತ್ತದೆ. ಕುಶಾಲನಗರದಲ್ಲಿ ಸರ್ಕಸ್ ಪ್ರದರ್ಶನಕ್ಕೆ ಸ್ಥಳೀಯ ಅಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಿದ್ದು, ಎಲ್ಲರಿಗೂ ಕೃತಜ್ಞರಾಗಿರುವುದಾಗಿ ತಿಳಿಸಿದರು.
Back to top button
error: Content is protected !!