ಕುಶಾಲನಗರ, ನ 03: ಸಾರಿಗೆ ಇಲಾಖೆ ವಿರುದ್ಧ ನ.05 ರಂದು ತೊರೆನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಯಲಿದೆ. ಗ್ರಾಮದ ಮೂಲಕ ಹಾದುಹೋಗುವ ಸಾರಿಗೆ ಬಸ್ ಗಳು
ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಬಸ್ ನಿಲುಗಡೆಗೊಳಿಸಲು ಹಲವು ಬಾರಿ ಮನವಿ ಮಾಡಲಾಗಿದ್ದರೂ ಕೂಡ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ನಿರಾಕರಿಸುತ್ತಿರುವುದರಿಂದ ತೀವ್ರ ಅನಾನುಕೂಲ ಉಂಟಾಗಿದೆ. ಈ ನಿಟ್ಟಿನಲ್ಲಿ ತೊರೆನೂರು ಗ್ರಾಮದ ಕೊಡಗು ರಕ್ಷಣಾ ವೇದಿಕೆ ಘಟಕದ ವತಿಯಿಂದ ಶನಿವಾರ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಘಟಕದ ಅಧ್ಹಕ್ಷ ಸಾಗರ್ ತೊರೆನೂರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Back to top button
error: Content is protected !!