ಕುಶಾಲನಗರ, ಅ 27: ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮೀಣ ಪ್ರದೇಶಗಳ ಜನರು ಜನಪದ ಸಾಂಪ್ರದಾಯಿಕವಾಗಿ ಆಚರಿಸಿದರು.
ಗ್ರಾಮಗಳಲ್ಲಿನ ಜನರ ಬದುಕಿನ ಜೀವಾಳವಾಗಿರುವ ಗೋವುಗಳು ಹಾಗು ಗೋವುಗಳಿಂದ ಉತ್ಪತ್ತಿಯಾಗುವ ಕೊಟ್ಟಿಗೆಯ ಗೊಬ್ಬರದ ರಾಶಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿರುವುದು ಜನಪದ ಸಂಸ್ಕ್ರತಿಯನ್ನು ಜೀವಂತಗೊಳಿಸಿತ್ತು.
ಹಬ್ಬದ ದಿನದ ಸೂರ್ಯೋದಯದ ಸಂದರ್ಭ ಗೋವುಗಳ ಸಗಣಿಯ ಉಂಡೆಗೆ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಮನೆ ಮುಂದಿನ ಬಾಗಿಲು ಹಾಗು ಆವರಣಕ್ಕಿಟ್ಟು ಪೂಜಿಸಲಾಯಿತು. ಬಳಿಕ ಸೂರ್ಯಾಸ್ತಮಾನದ ಹೊತ್ತಿನಲ್ಲಿ ಅಲಂಕೃತ ಹೂಗಳ ಸಗಣಿ ಉಂಡೆಗಳನ್ನು ತಿಪ್ಪೆಗಳಿಗೆ ಒಯ್ದು ಅಲ್ಲಿ ತಿಪ್ಪೆಯನ್ನು ಪೂಜಿಸಲಾಯಿತು.
ಗೋವುಗಳು ಸಮೃದ್ದಿಯಾದಷ್ಟು ಗೋವುಗಳ ಅವಲಂಬಿತ ಕೃಷಿ ಕುಟುಂಬಗಳು ಸಮೃದ್ದಿಯಾಗುತ್ತವೆ.
ಆದ್ದರಿಂದ ಪೂರ್ವಜರ ಕಾಲದಿಂದಲೂ ದೀಪಾವಳಿಯಂದು ಗೋವುಗಳನ್ನು ಪೂಜಿಸಿ ತಿಪ್ಪೆಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಎಂದು ಕೃಷಿ ಮಹಿಳೆ ಮಣಿಯಮ್ಮ ಹೇಳಿದರು.
Back to top button
error: Content is protected !!