ಸಭೆ

ಮುಳ್ಳುಸೋಗೆ ಗ್ರಾಪಂ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ

ಗ್ರಾಪಂ ಗೆ ಗಾಂಧಿ ಗ್ರಾಮ ಪ್ರಶಸ್ತಿ‌ ಬಗ್ಗೆ ಸದಸ್ಯ ಆಸಿಫ್ ಮೆಚ್ಚುಗೆ

ಕುಶಾಲನಗರ, ಅ 11: ಮುಳ್ಳುಸೋಗೆ ಗ್ರಾಮಪಂಚಾಯಿತಿಯ ಗುಮ್ಮನಕೊಲ್ಲಿ 4 ಮತ್ತು 5ನೇ ವಾರ್ಡ್ ಸಭೆ ಸೋಮವಾರ ನಡೆಯಿತು.
ನಾಲ್ಕನೇ ವಾರ್ಡ್ ಸಭೆ ವಾರ್ಡ್ ಸದಸ್ಯ ಸಿ.ಎಂ. ಆಸಿಫ್ ರವರ ಅಧ್ಯಕ್ಷತೆಯಲ್ಲಿ ವಿನಾಯಕ ಬಡಾವಣೆಯ ಅಂಗನವಾಡಿಯಲ್ಲಿ ನಡೆಯಿತು.
5ನೇ ವಾರ್ಡನ ಸಭೆ ಸಂಗೀತ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಕುಂದುಕೊರತೆ ಬಗ್ಗೆ ಸಾರ್ವಜನಿಕರಿಂದ ಸುದೀರ್ಘ ಸಮಯದ ಅರೋಗ್ಯಕರ ಚರ್ಚೆ ನಡೆಯಿತು. ಈ ಬಾರಿ ಆಯ್ಕೆ ಆಗಿರುವ ಕೆಲವು ಸದಸ್ಯರು, ಅಭಿವೃದ್ಧಿ ಅಧಿಕಾರಿಗಳ ಸಹಕಾರದಿಂದ ಗ್ರಾಮ ಹಿಂದೆಂದೂ ಕಾಣದ ಮಾದರಿ ಅಭಿವೃದ್ಧಿ ಕಂಡಿದೆ ಎಂದು ಗ್ರಾಮಸ್ಥರು ಸಂತಸದ ಅಭಿಪ್ರಾಯ ವ್ಯಕ್ತ ಪಡಿಸಿದರು. ತದನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಭೆಯ ಅಧ್ಯಕ್ಷ ಸಿ. ಎಂ. ಆಸಿಫ್, ನಮ್ಮ ಪಂಚಾಯತಿಗೆ ನೀಡಿರುವ ಈ ಬಾರಿಯ ಗಾಂಧಿ ಗ್ರಾಮ ಪ್ರಶಸ್ತಿಯು ಗ್ರಾಮದ ಜನತೆಗೆ ಸಿಕ್ಕಿರುವ ಪ್ರಶಸ್ತಿ ಆಗಿರುತ್ತದೆ. ಈ ಬಾರಿ ಗ್ರಾಮದ ಅಭಿವೃದ್ಧಿಗೆ ಪಂಚಾಯತಿ ಅನುದಾನ ಹಾಗೂ ಶಾಸಕರು ನಿಧಿ ಯಿಂದ ಸುಮಾರು 75 ಲಕ್ಷ ರೂಪಾಯಿ ಅನುದಾನವನ್ನು ಗುಮ್ಮನಕೊಲ್ಲಿಯ ಎರಡು ವಾರ್ಡಿಗೆ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ನೀಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ತಿಳಿಸಿದರು.
ಗ್ರಾಮಸ್ಥರು ಸ್ವಚ್ಛತೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸೂಕ್ತವಾದ ಸಲಹೆಗಳನ್ನ ಕೊಡಿ. ಪಂಚಾಯತಿಯು ಅದನ್ನ ಕಾರ್ಯರೂಪಕ್ಕೆ ತರುವಂತ ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ನಮ್ಮ ಪಂಚಾಯತ್ ಗೆ ಅಮೃತ ಗ್ರಾಮ ಪ್ರಶಸ್ತಿ ಬರಲು ತಾವೆಲ್ಲರೂ ಕೈ ಜೋಡಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಮಣಿ, ಹರಿಣಿ ಪ್ರಭಾಕರ್, ಎಂ.ಆರ್ ಗಣೇಶ್, ಸಂಗೀತ, ಕುಮಾರ ಸ್ವಾಮಿ, ಕಾರ್ಯದರ್ಶಿ ಮಂಜುನಾಥ್, ಪಿಡಿಓ ಸುಮೇಶ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!